(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಖೈದಿಗಳನ್ನ ಉತ್ತಮ ಪ್ರಜೆಗಳಾಗಿ ರೂಪಿಸಲು ಅದಿಕಾರಿಗಳು ಶ್ರಮಿಸಬೇಕು ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಸಲಹೆ ನೀಡಿದರು.
ಚಾಮರಾಜನಗರ ಕಾರಾಗೃಹಕ್ಕೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಖೈದಿಗಳು ಶಿಸ್ತು ಕಲಿಯಲು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ದೇಶಭಕ್ತಿ ಹಾಗೂ ನಾಡಗೀತೆ ಹಾಡಿಸುವುದು ಹಾಗೂ ಸಲ್ಯೂಟ್ ಮಾಡುವ ವಿದಾನಗಳನ್ನ ಕಲಿಸಿಕೊಡುವಂತೆ ಅದಿಕಾರಿಗಳಿಗೆ ಅಲೋಕ್ ಕುಮಾರ್ ಸೂಚಿಸಿದರು.
ಕಾರಾಗೃಹ ಸೂಪರಿಡೆಂಟ್ ಶಿವಕುಮಾರ್ ಹಾಗೂ ಅದೀನ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕರು ಇದೆ ವೇಳೆ ಉತ್ತಮ ಕಾರ್ಯನಿರ್ವಹಿಸುತ್ತಿರುವ ೭ ಸಿಬ್ಬಂದಿಗೆ ಪ್ರಶಂಸನೀಯ ಪತ್ರ ವಿತರಿಸಿದರು.

