ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಸಂಬಂಧ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಂತೇಶ ಶಿರೋಳ್ ಮತ್ತು ಮಂಜುನಾಥ ದುಮ್ಮವಾಡ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ನಿವಾಸಿಗಳಾಗಿದ್ದು ಬೇನಾಪಿ ಆಸ್ತಿ ಸಂಬಂಧ ಇವರೇ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು.
ಗುರೂಜಿ ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು.
ಬಳಿಕ ಆಸ್ತಿ ವಾಪಸ್ ಕೇಳಿದಾಗ ಗಲಾಟೆ ಆರಂಭವಾಗಿತ್ತು.
ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಚಂದ್ರಶೇಖರ್ ಗುರೂಜಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

