ಸರ್ಕಾರದ ವಿರುದ್ಧ ಎದೆ ತಟ್ಟಿನಿಂತ ಕಬ್ಬುಬೆಳೆಗಾರರು

ಬೆಂಗಳೂರು: ರಾಜ್ಯ ರಾಜಧಾನಿಯ ಹೃದಯ ಭಾಗದಲ್ಲಿ‌ ಹಸಿರುಶಾಲುಗಳದ್ದೇ ಕಾರುಬಾರು.ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ಕಿಚ್ಚಿನಿಂದ ಎದೆ ತಟ್ಟಿ ನಿಂತಿದ್ದಾರೆ.

ಸರ್ಕಾರದ ವಿರುದ್ಧ ರಾಜ್ಯದ ಕಬ್ಬು ಬೆಳೆಗಾರರು ಪ್ರತಿಭಟನೆ ಪ್ರಾರಂಭಿಸಿದ್ದು ಮುಖ್ಯ ಮಂತ್ರಿಗಳ ಭೇಟಿಗೆ ಪಟ್ಟು ಹಿಡಿದಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರೈತರು ಪ್ರತಿಭಟನೆ ಪ್ರಾರಂಭಿಸಿದ್ದು, ಬೆಳಗ್ಗೆ ಸಿಎಂ ಮನೆ ಮುತ್ತಿಗೆ ಹಾಕಲು ಹರ ಸಾಹಸ ಪಟ್ಟರು. ಆದರೆ ಪೊಲೀಸರು ಅರ್ಧಕ್ಕೆ ಅವರನ್ನು ತಡೆದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆಯಲ್ಲಿ ಅನ್ನದಾತರು ಹೊರಟರು.

ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ ಹಾಗೂ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ.ಆದರೆ

ಸರ್ಕಾರ ಇದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾನಿರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ರಾಜಧಾನಿಗೆ ಬಂದಿದ್ದಾರೆ.

ಕಬ್ಬುಬೆಳೆಗಾರರು ರೈಲು ಹಾಗೂ ಬಸ್ ಗಳ ಮೂಲಕ ಬೆಂಗಳೂರಿಗೆ ಬಂದಿದ್ದಾರೆ.ಆದರೆ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು,ಅವರುಗಳನ್ನು ಸಿಎಂ ಭೇಟಿಗೆ ಮುನ್ನವೇ ವಶಕ್ಕೆ ಪಡೆಯಲಾಯಿತು.