ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

ಬೆಂಗಳೂರು: ಹರ್ ಘರ್ ಅಭಿಯಾನ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಧ್ವಜ ವಿತರಣೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಬಳಿ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಈಗಾಗಲೇ 1 ಕೋಟಿ 8 ಲಕ್ಷ ಧ್ವಜ ವಿತರಿಸಿದ್ದೇವೆ ಎಂದು ಹೇಳಿದರು.

ವಿಶ್ವ ಅಂಗಾಂಗ ದಿನ ಹಿನ್ನೆಲೆ  ನಾವು ಸತ್ತ ಮೇಲೂ ನಮ್ಮ ಅಂಗಾಂಗ ದಾನ ಮಾಡಬೇಕು ಎಂದು ಇದೇ ವೇಳೆ ಸಿಎಂ ಕರೆ ನೀಡಿದರು.

ಪುನೀತ್  ರಾಜ್ ಕುಮಾರ್ ಅವರು ಅಂಗಾಂಗ ದಾನ ಮಾಡಿದ್ದಾರೆ. ಅಪ್ಪು ನಾಲ್ಕು ಜನರಿಗೆ ದೃಷ್ಠಿ ನೀಡಿದ್ದಾರೆ. ಸಾಧಕನಿಗೆ ಸಾವಿಲ್ಲ. ಸಾವಿನ ನಂತರೂ ಬದುಕಬಹುದು ಎಂಬುದಕ್ಕೆ ಅವರೇ‌ಉದಾಹರಣೆ ಎಂದು ತಿಳಿಸಿದರು.

ಯುವಕರು ಅಂಗಾಂಗ ದಾನ ಮಾಡಬೇಕು. ನಾನೂ ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಮೆಟ್ಟಿಲಿನ ಬಳಿ ಸೇರಿದ್ದ ಸಾವಿರಾರು ಮಂದಿಯ  ಕೈಯಲ್ಲಿ ರಾಷ್ಟ್ರಧ್ವಜ ರಾರಾಜಿಸಿತು. ಸಿಎಂ ಬೊಮ್ಮಾಯಿಗೆ ಸಚಿವರು ಸಾಥ್ ನೀಡಿದರು.