ಮಾತಿಗೆ ತಪ್ಪಿದ ಮಗ ಸಿದ್ದರಾಮಯ್ಯ-ವಿಶ್ವನಾಥ್ ಟೀಕಾಪ್ರಹಾರ

ಮೈಸೂರು: ಬಜೆಟ್ ಗಿಂತ ಸಾಲವೇ ಹೆಚ್ಚಿದೆ
ಏಳೂವರೆ ಲಕ್ಷ ಕೋಟಿಯಲ್ಲಿ ಸಿದ್ದರಾಮಯ್ಯ ನವರೆ ಐದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದರು.

ಮೈಸೂರಿನ ಜನದರ್ಶಿನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಷ್ಟೊಂದು ಸಾಲ ಇಟ್ಟುಕೊಂಡಿದ್ದರೂ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಮಹಿಳೆಯರಿಗೆ ಕೊಡುವ ಎರಡು ಸಾವಿರ ಹೆಂಡದ ಅಂಗಡಿಗೆ ಹೋಗುತ್ತಿದೆ. ಕೃಷ್ಣ ಮೇಲ್ದಂಡೆ ಮಾಡಿದ್ದರೆ ನೀರಾವರಿ ಆಗಿ ಉದ್ಯೋಗವಾದರೂ ಸಿಗುತ್ತಿತ್ತು. ಈಗ ಪುರುಷರಿಗೆ ಹೆಂಡ ಕುಡಿಸಿ‌ ಗಾಂಧಿ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ಚರಿತ್ರೆ ಓದಿಕೊಳ್ಳಿ ಸಿದ್ದರಾಮಯ್ಯ ಅವರೆ ಎಂದು ಸಲಹೆ ನೀಡಿದ ವಿಶ್ವನಾಥ್, 1964 ರಲ್ಲಿ ಯಶೋಧರ ದಾಸಪ್ಪ ರಾಜಿನಾಮೆ ನೀಡಿದಾಗ ಹೆಂಡದ ಮಾರಾಟ ನಿರ್ಬಂಧ ಆಗಿತ್ತು ಎಂದು ನೆನಪಿಸಿದರು.

ನಾನೇ ಎಂಬ ಅಹಂಕಾರ, ಹಮ್ಮು, ಬಿಡಬೇಕು, ಹೆಂಡದಿಂದ 45 ಸಾವಿರ ಕೋಟಿ‌ ಬರುತ್ತಿದೆ, ಅದರಲ್ಲಿ ಜನರಿಗೆ ಹೆಂಡ ಕುಡಿಸಿ ಕುಟುಂಬ ಹಾಳು ಮಾಡುತ್ತಿ ದ್ದಾರೆ. ದಿಕ್ಕು ದೆಸೆ ಇಲ್ಲದಂತೆ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಇಂತಹ ಸಿದ್ದರಾಮಯ್ಯರನ್ನ ಯಾಕಾದಾರೂ ಕರೆ ತಂದೆನೊ ಅಂತ ಪಶ್ಚಾತ್ತಾಪ ಆಗಿ ಈಗ ಪಶ್ಚಾತ್ತಾಪ ಸತ್ಯಾಗ್ರಹ ಮಾಡುವೆ ಯಾರೂ ಬರಲಿಲ್ಲ ಅಂದರೂ ಪರವಾಗಿಲ್ಲ ನಾನೊಬ್ಬನೆ ಕೂರುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.

ಏಳೂವರೆ ಲಕ್ಷ ಕೋಟಿ ಸಾಲ ಇಟ್ಟುಕೊಂಡು ನಾಲ್ಕೂವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದಾರೆ, ಕುರುಬ ಅಂತ ಹೊಟ್ಟೆ ಉರಿ ಎಂದು ಜಾತಿ ಹೆಸರು ಹೇಳುತ್ತಿದ್ದಾರೆ ಆದರೆ ತನು, ಮನ, ಧನ ಕೊಟ್ಟ ಕುರುಬರಿಗೂ ಏನು ಮಾಡುತ್ತಿಲ್ಲ.ಹತ್ತು ಲಕ್ಷ ಅಲೆಮಾರಿ ಕುರುಬರಿದ್ದಾರೆ,ಹತ್ತು ಲಕ್ಷ ಕುರಿ ಇವೆ
ಅವರಿಗೆ ರಕ್ಷಣೆ ಕೊಡದ ಕುರುಬ ಸಿಎಂ ಸಿದ್ದರಾಮ ಯ್ಯ ಕುರಿ ಕಾಯುವರ ಮೇಲೆ ಅತ್ಯಾಚಾರ, ಕೊಲೆ ಆಗುತ್ತಿದ್ದರೂ ಅವರುಗಳ ರಕ್ಷಣೆಗೆ ಏನು ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ನೇಹಮಹಿ ಕೃಷ್ಣ ನೆಲದ ಕಾನೂನು ಬಗ್ಗೆ ಹೋರಾಟ ಮಾಡುತ್ತಿದ್ದು, ಇವರನ್ನು ಜೈಲಿಗೆ ಹಾಕುತ್ತಿದ್ದಾರೆ,
ಸಂವಿಧಾನದ ಬಗ್ಗೆ ಮಾತಾಡುವ ಇವರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

45 ಸಾವಿರ ಹೆಂಡದ ಪಾಪದ ಹಣದಲ್ಲಿ‌ ಸರ್ಕಾರ ನಡೆಸುತ್ತಿದ್ದಾರೆ. ವಿದ್ಯುತ್ ನಲ್ಲಿ ಶೇಕಡ 70 ರಷ್ಟು ಸೋರಿಕೆ ಆಗುತ್ತಿದೆ,ಆದರೆ ಆರ್ಥಿಕ ತಜ್ಞ ಸಿದ್ದರಾಮ ಯ್ಯ ನಿಯಂತ್ರಣ ಮಾಡಲಿಲ್ಲ ಮಾತಿಗೆ ತಪ್ಪಿದ ಮಗ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಬಿಟ್ಟು ಕೊಡಲಿಲ್ಲ ಎಂದು ಆರೋಪಗಳ ಸುರಿ ಮಳೆ ಯನ್ನೆ ವಿಶ್ವನಾಥ್ ಸುರಿಸಿದರು.

ಉಚಿತ ಗ್ಯಾರಂಟಿ ಸ್ಕೀಂ ಕೊಡುವ ಸರ್ಕಾರವನ್ನು
ಸುಪ್ರೀಂ ಕೋರ್ಟ್ ಟೀಕಿಸಿದೆ ಜನರಿಗೆ ಉದ್ಯೋಗ ಕೊಡಿ ಅಂತ ಹೇಳಿದ್ದಾರೆ ಅದನ್ನಾದರೂ ಅರಿತುಕೊಳ್ಳಿ ಎಂದು ಸಲಹೆ ನೀಡಿದರು.