ಬೆಂಗಳೂರು: ವಿದ್ಯಾರ್ಥಿಗಳ ಶಿಕ್ಷಣದ ಪ್ರಮುಖ ಘಟ್ಟ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಬಂದಿರುವುದು ವಿಶೇಷ.
ಈಗಾಗಲೇ ಇಲಾಖೆ ವೆಬ್ ಸೈಟ್ ನಲ್ಲಿ (web: https://karresults.nic.in/) ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಿದೆ. SMS, ವಾಟ್ಸಪ್ ಮೂಲಕವೂ ಫಲಿತಾಂಶ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ 7,70,209 ವಿದ್ಯಾರ್ಥಿಗಳ ಪೈಕಿ, 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ 3,77,922 (96.18%) ಬಾಲಕಿಯರು, 3,46,871 (91.94%) ಬಾಲಕರು ಉತ್ತೀರ್ಣರಾಗಿದ್ದಾರೆ.ಪ್ರತಿ ಬಾರಿಯಂತೆ ಈಗಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರ ಫಲಿತಾಂಶದಲ್ಲೂ ಮಹತ್ತರ ಬದಲಾವಣೆ ಕಂಡುಬಂದಿದೆ,ಹಾಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ಈ ಬಾರಿ ನಗರ ಭಾಗದ 3,05,533 (93.2%) ವಿದ್ಯಾರ್ಥಿಗಳು, ಗ್ರಾಮೀಣ ಭಾಗದ 4,19,261 (94.80%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 68,207 ಮಕ್ಕಳು A+, 1,30,403 ಮಕ್ಕಳು ʻAʼ ಗ್ರೇಡ್ (ಮಾನ್ಯತೆ) ಪಡೆದುಕೊಂಡಿದ್ದಾರೆ.
1,40,963 ವಿದ್ಯಾರ್ಥಿಗಳು B+, 1,42,645 ಮಕ್ಕಳು B ಮಾನ್ಯತೆ ಪಡೆದರೆ, 1,28,722 ಮಕ್ಕಳು 1,13,854 ಮಕ್ಕಳು C ಮಾನ್ಯತೆ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಈ ಬಾರಿ 7 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ:
ಅಥಣಿ ತಾಲೂಕಿನ ಕಟಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಪಾಟೀಲ್. ದಾವಣಗೆರೆಯ ಚನ್ನಗಿರಿ ತಾಲೂಕಿನ ಕಬ್ಬಾಳ ಶ್ರೀವಿದ್ಯಾಲಕ್ಷ್ಮೀ ಹೈಸ್ಕೂಲ್ನ ಭರತ್ ಜಿ,
ಚಿಕ್ಕಮಗಳೂರು ತಾಲೂಕಿನ ಸೇಂಟ್ ಮೇರಿ ಹೈಸ್ಕೂಲ್ನ ಬೃಂದಾ ಎಂ ತಾಪ್ಸೆ,
ಬೆಂಗಳೂರು ಉತ್ತರದ ಪೂರ್ಣಪ್ರಜ್ಞಾ ಶಾಲೆಯ ಧನುಷ್ ಸುದೀರ್,
ಉಡುಪಿಯ ಕುಂದಾಪುರ ತಾಲೂಕಿನ ಮದರ್ ತೆರೇಸಾ ಶಾಲೆಯ ಪ್ರೀಥಮ್ ಜಿ ಪೂಜಾರ್,ವಿಜಯಪುರ ಮುದ್ದೇಬಿಹಾಳ ತಾಲೂಕಿನ ನಗರಬೆಟ್ಟದ ಆಕ್ಸ್‌ಫರ್ಡ್ ಹೈಸ್ಕೂಲ್ನ ಸೌಜನ್ಯ ಬಸವರಾಜ್ ಕಂದಕೂರ್,ರಾಯಚೂರು-ಮಾನವಿಯ ಬಿವಿಆರ್ ಹೈಸ್ಕೂಲ್ನ ಸುಖದೇವ್ ಇವರುಗಳು ರಜ್ಯಕ್ಕೇ ಟಾಪರ್ಸ್.
ಮೊದಲ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ 98.40% ಎರಡನೆ ಸ್ಥಾನ ಉಡುಪಿ 98.18%,ಉತ್ತರಕನ್ನಡ ಜಿಲ್ಲೆ 98.09% ತೃತೀಯಸ್ಥಾನ ಪಡೆದರೆ
ಕಲಬುರ್ಗಿ 85.06% ಪಡೆದು ಕನೆಯ ಸ್ಥಾನ ಪಡೆದಿದೆ.
ಈ ಬಾರಿ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಇದೇ ವೇಳೆ ಮಧು ಬಂಗಾರಪ್ಪ ತಿಳಿಸಿದರು.

