ಟಾಕ್ಸಿಕ್ ಹವಾ ಪ್ರಾರಂಭ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಬೆಂಗಳೂರು/ಮೈಸೂರು:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾ ಅಬ್ಬರ ಪ್ರಾರಂಭವಾಗಿದ್ದು,ಅಭಿಮಾನಿಗಳಯ ಫುಲ್ ಖುಷ್.

ಸಾಮಾನ್ಯವಾಗಿ ಸಿನೆಮಾಗಳು ಶುಕ್ರವಾರ ಬಿಡುಗಡೆ ಯಾಗುತ್ತವೆ,ಒಮ್ಮೊಮ್ಮೆ ಗುರುವಾರ ಕೂಡಾ ರಿಲೀಸ್ ಆದ ಉದಾಹರಣೆಗಳಿವೆ.

ಆದರೆ ಟಾಕ್ಸಿಕ್ ಹವಾ ಇಂದಿನಿಂದಲೇ ಪ್ರಾರಂಭವಾಗಿದೆ.ಇಂದು ಟಾಕ್ಸಿಕ್ ಜಗತ್ತಿನಾದ್ಯಂತ ತೆರೆಕಂಡಿದೆ, ಅಭಿಮಾನಿಗಳಲ್ಲಿ ಸಂಭ್ರಮ ಹೇಳತೀರದಾಗಿದೆ.

ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಯಶ್‌ ಅವರನ್ನ ಮತ್ತೆ ಬೆಳ್ಳಿತೆರೆಯ ಮೇಲೆ ನೋಡುತ್ತಿರುವ ಫ್ಯಾನ್ಸ್ ಗಳ ಅಬ್ಬರ ಚಿತ್ರಮಂದಿರಗಳ ಮುಂದೆ ಜೋರಾಗಿದೆ.

ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿದೆ,ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕರ್ನಾಟಕದಲ್ಲೂ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಬಹುಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಮೊದಲ ಶೋ ವೀಕ್ಷಿಸಲು ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್‌ಗಳ ಮುಂದೆ ದಾಂಗುಡಿ ಇಟ್ಟಿದ್ದರು.

ಪರದೆಯ ಮೇಲೆ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಜೈಕಾರ, ಶಿಳ್ಳೆ, ಚಪ್ಪಾಳೆ ಒಂದೆಡೆಯಾದರೆ,ರಾಕಿ ಬಾಯ್, ಯಶ್‌ ಮುಂತಾದ ಘೋಷಣೆಗಳು ಮೊಳಗಿದವು.

ಕೆಲವೆಡೆ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸ್ಕ್ರೀನ್‌ ಮೇಲೆ ರಾಕಿಂಗ್ ಸ್ಟಾರ್ ಕಾಣಿಸಿಕೊಂಡ ಕ್ಷಣ ಹೂಮಳೆ ಸುರಿಸಿ ಸಂಭ್ರಮಿಸಿದರು.