ಅಯೋಧ್ಯೆ ರಾಮ ಮಂದಿರ ಕಟ್ಟಿದ್ದು ಕೇಂದ್ರ ಸರ್ಕಾರವಲ್ಲ: ಪೇಜಾವರ ಶ್ರೀ

ಕೊಪ್ಪಳ: ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇತರ ಧರ್ಮಗಳ ಪ್ರಾರ್ಥನಾ ಮಂದಿರಗಳನ್ನು ಹೇಗೆ ಆಯಾಯ ಧರ್ಮದವರಿಗೆ ನೀಡಲಾಗಿದೆಯೋ ಅದೇ ರೀತಿ ಹಿಂದೂ ದೇವಾಲಯಗಳನ್ನೂ ಹಿಂದೂಗಳಿಗೆ ಒಪ್ಪಿಸಬೇಕು ಶ್ರೀ ಗಳು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಲಯದ ಆದೇಶವನ್ನು ಪಾಲಿಸಬೇಕು. ಹಿಂದೂ ಧರ್ಮ ಹಾಗು ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಆಗುತ್ತಿದ್ದು ಅದನ್ನು ನಿಲ್ಲಿಸಬೇಕು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದು ಕೇಂದ್ರ ಸರಕಾರವಲ್ಲ,ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಹಿಂದೂಗಳ ಟ್ರಸ್ಟ್‌ನಿಂದ ನಿರ್ಮಿಸಲಾಗಿದೆ,ಅಯೋಧ್ಯೆ ರಾಮ ಮಂದಿರ ಕೆಡವುತ್ತೇವೆ ಎಂದರೆ ಅದು ಸರ್ವೋಚ್ಚ ನ್ಯಾಯಲಯದ ಆದೇಶ ಉಲ್ಲಂಘಿಸಿದಂತೆ ಎಂದು ತಿಳಿಸಿದರು.

ರಾಮಮಂದಿರ ನಿರ್ಮಾಣವಾಗಿದೆ, ಮಂದಿರವನ್ನು ಮಂದಿರವಾಗಿ ಉಳಿಸಿಕೊಳ್ಳಲು ಹಿಂದೂ ಧರ್ಮ ಉಳಿಯಬೇಕು. ರಾಷ್ಟ್ರ, ದೇಶ ಪ್ರೇಮ ಉಳಿಸಬೇಕು, ದೇಶದ ಎಲ್ಲಾ ಕಡೆ ಹನುಮ ದೇವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎಂದು ಪೇಜಾವರ ಶ್ರೀಗಳು ತಿಳಿಸಿದರು.