ಚುನಾವಣಾ ಪ್ರಚಾರದಲ್ಲಿ ಮಕ್ಕಳು ಭಾಗಿ !

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವುದೇ ಪಕ್ಷಗಳು ಚುನಾವಣೆ ಮತ್ತು ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ.

ತಪ್ಪಿದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ತಿದ್ದುಪಡಿ 2016ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಾಲಕಾರ್ಮಿಕ ಯೋಜನಾ ಸೊಸೈಟಿ ತಿಳಿಸಿದೆ.

ಆದರೆ ಬುದ್ದಿವಾದ ಹೇಳಬೇಕಾದ ಪೋಷಕರು, ಕಾರ್ಯಕರ್ತರು ಕಣ್ಣಿದ್ದೂ ಕುರುಡರಾಗಿದ್ದರು.

ಚುನಾವಣಾ ಆಯೋಗ ಸ್ಪಷ್ಟ ನಿರ್ದೇಶನಗಳನ್ನ ನೀಡುತ್ತಿದ್ದರೂ ಪಕ್ಷಗಳು ಅದಕ್ಕೂ ತಮಗೂ ಸಂಬಂದ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ.

ಪ್ರತಿಸಲವೂ ಹೀಗೆ ನಡೆಯಲು ಕಠಿಣ ಕಾನೂನು ಶಿಕ್ಷೆಯಾಗದೆ ಇರುವುದು  ಕಾರಣವಾಗಿದೆ.