ಡ್ರಗ್ಸ್ ಜಾಲದ ನಂಟು ನನ್ನ ಗಮನಕ್ಕೆ ಬಂದಿಲ್ಲ -ನಟ ದರ್ಶನ್

ದಾವಣಗೆರೆ: ಡ್ರಗ್ಸ್ ಜಾಲದ ನಂಟು ನನ್ನ ಗಮನಕ್ಕೆ ಬಂದಿಲ್ಲ ಎಂದು ಖ್ಯಾತ ನಟ ದರ್ಶನ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ದರ್ಶನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲೈಟ್ ಬಾಯ್ ನಿಂದ ಸಿನಿಮಾ ವೃತ್ತಿ ಆರಂಭಿಸಿ ಇಂದು ನಾಯಕ ನಟನಾಗಿ ಬೆಳೆಯುವವರೆಗೆ 26 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, ಡ್ರಗ್ಸ್ ಜಾಲದ ನಂಟು ನನ್ನ ಗಮನಕ್ಕೆ ಬಂದಿಲ್ಲ ಎಂದರು ದರ್ಶನ್.
ಪೆÇಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ನಾನು ಯಾವ ಹೇಳಿಕೆಯೂ ನೀಡುವುದಿಲ್ಲ ಎಂದರು.
ತರಗತಿಯಲ್ಲಿ ಚೆನ್ನಾಗಿ ಓದಿ ರಾ ್ಯಂಕ್ ಪಡೆಯುವ ವಿದ್ಯಾರ್ಥಿ ಇರುತ್ತಾರೆ, ಶೂನ್ಯ ಮಾರ್ಕ್ಸ್ ತೆಗೆದುಕೊಳ್ಳುವರು ಇರುತ್ತಾರೆ. ಹಾಗೆಂದು ಇಡೀ ಕ್ಲಾಸ್ ನ ಮಕ್ಕಳು ದಡ್ಡರು ಎಂದು ಹೇಳಲಾಗುತ್ತದೆಯೇ ಎಂದ ದರ್ಶನ್, ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಉದ್ಯಮದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ತೀರಿಕೊಂಡ ಯುವ ನಟನ ಹೆಸರನ್ನು ಡ್ರಗ್ ದಂಧೆ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಪ್ರಸ್ತಾಪಿಸಿದ್ದಕ್ಕೆ ದರ್ಶನ್ ಬೇಸರ ವ್ಯಕ್ತಪಡಿಸಿ, ಒಂದು ವೇಳೆ ಡ್ರಗ್ ಆರೋಪದಲ್ಲಿ ಅವರು ಅಪರಾಧಿ ಎಂದು ಸಾಬೀತಾಯಿತು ಎಂದಿಟ್ಟುಕೊಳ್ಳಿ, ಅವರನ್ನು ಕರೆದುತಂದು ಶಿಕ್ಷೆ ಕೊಡಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.