ದಸರಾ ಫಿಲಂ ಫೆಸ್ಟಿವಲ್ ನಲ್ಲಿ112 ಚಿತ್ರ ಪ್ರದರ್ಶನ: ಸೆ 26ಕ್ಕೆ ಸಿಎಂ ಚಾಲನೆ

ಮೈಸೂರು: ,ಈ ಬಾರಿಯ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವ, ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  
ದಸರಾ ಮಹೋತ್ಸವ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ  ಚಲನಚಿತ್ರೋತ್ಸವವನ್ನು ಸೆ.26ರಂದು ಬೆಳಿಗ್ಗೆ11ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ ಡಾ.ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಸರಾ ಚಲನಚಿತ್ರೋತ್ಸವ ಸಮಿತಿಯ ವಿಶೇಷಾಧಿಕಾರಿ ಶೇಷು ಮಾತನಾಡಿ, ಚಲನಚಿತ್ರೋತ್ಸವವು ಸೆ.27ರಿಂದ ಆರಂಭವಾಗಿ ಅಕ್ಟೋಬರ್ 3ರವರೆಗೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
56ಕನ್ನಡ, 28ಪನೋರಮಾ, 28ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್ ನಲ್ಲಿ 3 ಮತ್ತು ಡಿಆರ್ ಸಿಯ 1ಸ್ಕ್ರೀನ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ದಿ.ಪುನೀತ್ ರಾಜ್ ಕುಮಾರ್ ಹಾಗೂ ಸಂಚಾರಿ ವಿಜಯ್ ನಟಿಸಿರುವ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದ್ದು ಪುನೀತ್ ನಟನೆಯ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ, ಯುವರತ್ನ ಪ್ರದರ್ಶನ ಗೊಳ್ಳಲಿವೆ.
ಸಂಚಾರಿ ವಿಜಯ್ ಅಭಿನಯದ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಪುನೀತ್ ಅವರ ಪತ್ನಿ ಅಶ್ವಿನಿ ಅವರು ಶಕ್ತಿಧಾಮದ ಮಕ್ಕಳೊಂದಿಗೆ ಸೆ.27ರಂದು ಪುನೀತ್ ಅಭಿನಯಿಸಿರುವ ಬೆಟ್ಟದ ಹೂ ಚಿತ್ರವನ್ನು ವೀಕ್ಷಿಸಲಿದ್ದಾರೆ.
ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ನಟ ನಟಿಯರಾದ ಡಾ.ಶಿವರಾಜ್ ಕುಮಾರ್,ಅಮೃತ ಅಯ್ಯಂಗಾರ್, ಕಾವ್ಯಶೆಟ್ಟಿ, ಸುಧಾರಾಣಿ, ಅನುಪ್ರಭಾಕರ್ ಸೇರಿದಂತೆ ಅನೇಕ ತಾರೆಯರು ಭಾಗವಹಿಸಲಿದ್ದಾರೆ ಎಂದು ಶೇಷು ತಿಳಿಸಿದರು.
ಮೂರು ದಿನದ ಕಾರ್ಯಾಗಾರ ಸೆ.22ರಿಂದ 24ರವರೆಗೆ ನಡೆಯಲಿದ್ದು, ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಸಿನಿಮಾ ಪ್ರಿಯರಿಗೆ ಮಾಹಿತಿ ನೀಡಲಾಗುತ್ತದೆ. 
ಕಾರ್ಯಾಗಾರವನ್ನು ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. 
ಕಾರ್ಯಾಗಾರದಲ್ಲಿ ಚಂಪಾ ಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀಣ್ ಕೃಪಾಕರ್, ಪವನ್ ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು ಪ್ರವೇಶಕ್ಕೆ 300ರೂ.ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.   
ಕನ್ನಡ ಚಿತ್ರಗಳಾದ 100, 777ಚಾರ್ಲಿ, ಶ್ರೀಸುತ್ತೂರು ಮಠ-ಗುರುಪರಂಪರೆ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವ ರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ.
ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್1, ಲವ್ ಮಾಕ್ಟೇಲ್-2, ಮದಗಜ, ಮುಗಿಲ್ ಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು.
ಫೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸೂರತ್ ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.