ಹೆಚ್ ಡಿ ಕೆ ಗೆದ್ದು ಮಂತ್ರಿಯಾಗೋದು ನಿಶ್ಚಿತ: ಗುರುಪಾದಸ್ವಾಮಿ

ಮಂಡ್ಯ: ಈ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು 2ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ ಕೇಂದ್ರ ಸಚಿವರಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಹೇಳಿದರು ‌

ಮಂಡ್ಯ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪಾದಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ, ಕೇಂದ್ರ ಸರ್ಕಾರದ ಹತ್ತು ವರ್ಷದ ಸಾಧನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿದೆ ಎಂದು ಹೇಳಿದರು.

ಸಮಸ್ಥ ಸಮುದಾಯದವರನ್ನು ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಸಮಾನವಾಗಿ ತೆಗೆದುಕೊಂಡು ಸಮಗ್ರ ಆಡಳಿತದ ಮೂಲಕ ಭಾರತವನ್ನ ವಿಶ್ವಗುರು ಎಂಬ ಹೆಗ್ಗಳಿಕೆಗೆ ಮೋದಿ ಕಾರಣಜರ್ತರು ಎಂದು ತಿಳಿಸಿದರು.

ಈ ಭಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಹೆಚ್. ಡಿ ಕುಮಾರಸ್ವಾಮಿ  ರವರನ್ನ 2ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆಯಿಂದ ಜಯಗಳಿಸಲು ಮಂಡ್ಯ ಜನತೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್‌ ಜನರಿಗೆ ಖಾಲಿ ಚೊಂಬು ನೀಡಿತ್ತು. 10 ವರ್ಷಗಳಲ್ಲಿ ಬಿಜೆಪಿ ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದೆ. 12 ಕೋಟಿ ಶೌಚಾಲಯ,10 ಕೋಟಿ ಕುಟುಂಬ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜು ಕ್ಷತ್ರಿಯ ಸಮಾಜದ ಎನ್.ಎಸ್ ರಾಜೇಂದ್ರ , ಒಕ್ಕಲಿಗ ಯುವ ಮುಖಂಡ ವೈ.ಜೆ ನವೀನ್ ಕುಮಾರ್, ಮೈಸೂರು ಕುರುಬ ಸಮಾಜದ ಮುಖಂಡರಾದ ರಂಗನಾಥ್, ವರುಣಾ ಕ್ಷೇತ್ರದ ವೀರಶೈವ ಮುಖಂಡ ಕೋಣನೂರುಪುರ ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.