ಹೆಚ್.ಡಿ.ರೇವಣ್ಣ 4 ದಿನ ಎಸ್ಐಟಿ ವಶಕ್ಕೆ

ಬೆಂಗಳೂರು, ಮೇ.5: ಮಹಿಳೆ ಕಿಡ್ನಾಪ್ ಕೇಸಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ನಾಲ್ಕು ದಿನ ಎಸ್ಐಟಿ ಸೆಲ್ಲೇ ಗತಿ.

ಎಚ್ ಡಿ ರೇವಣ್ಣ ಅವರನ್ನು ಮಹಿಳೆ ಅಪಹರಣ ಕೇಸಿನ ಸಂಬಂಧ ಇಂದು ನ್ಯಾಯಾಧೀಶರ ಮುಂದೆ ಎಸ್ಐಟಿ ಹಾಜರುಪಡಿಸಿತು.

ನ್ಯಾಯಾಧೀಶರಾದ ರವೀಂದ್ರ ಕುಮಾರ್ ಕಟ್ಟಿಮನಿ ಅವರು ರೇವಣ್ಣ ಪರ ವಕೀಲರ ವಾದವನ್ನು ಮತ್ತು ಸರ್ಕಾರದ ಪರ ವಕೀಲರ ವಾದವನ್ನು ಆಲಿಸಿದರು.

ಆದರೆ ಎಸ್ಐಟಿ ಪೊಲೀಸರು ತಮಗೆ ಹೆಚ್ಚಿನ ವಿಚಾರಣೆ ಮಾಡುವ ಅಗತ್ಯವಿರುವುದರಿಂದ ರೇವಣ್ಣ ಅವರನ್ನು ತಮ್ಮ ಕಷ್ಟಡಿಗೆ ಕೊಡಬೇಕೆಂದು ಮನವಿ ಮಾಡಿದರು.

ರಾತ್ರಿ ಸುಮಾರು 8 ಗಂಟೆವರೆಗೂ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಕಡೆಗೆ ನಾಲ್ಕು ದಿನಗಳ ಕಾಲ ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪವನ್ನು ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ಎದುರಿಸುತ್ತಿದ್ದಾರೆ.

ನೋಟಿಸ್‌ ನೀಡಿದರೂ ವಿಚಾರಣೆಗೆ ಗೈರಾಗಿದ್ದ ರೇವಣ್ಣ ಅವರನ್ನು ಎಸ್‌ಐಟಿ ತಂಡ ನಿನ್ನೆ ದೇವೇಗೌಡರ ನಿವಾಸದಲ್ಲಿ ಬಂಧಿಸಿತ್ತು.

ಇಂದು ವೈದ್ಯಕೀಯ ಪರೀಕ್ಷೆ ಬಳಿಕ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ರೇವಣ್ಣರನ್ನು ಎಸ್‌ಐಟಿ ವಶಕ್ಕೆ ಒಪ್ಪಿಸಿದರು.