24 ಗಂಟೆಯಲ್ಲಿ ಲಕ್ಷದ ಗಡಿ ಮುಟ್ಟಿದ ಕೊರೋನಾ ಪ್ರಕರಣ

ನವದೆಹಲಿ:ದೇಶದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ದಾಂಗುಡಿ ಮುಂದುವರಿದಿದ್ದು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 90 ಸಾವಿರದ 928 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಸದ್ಯದಲ್ಲಿಯೇ ಲಕ್ಷದ ಗಡಿ ದಾಟಲಿದೆ.

ಇದರೊಂದಿಗೆ ಓಮಿಕ್ರಾನ್ ಪ್ರಕರಣಗಳೂ ಹೆಚ್ಚುತ್ತಿದೆ.

ಇದೇ ವೇಳೆ ಕೊರೊನಾದಿಂದ 325 ಜನರು ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷ 85 ಸಾವಿರ 401 ಕ್ಕೆ ಏರಿದೆ.

ಈ ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 4 ಲಕ್ಷ 82 ಸಾವಿರ 876 ಕ್ಕೆ ಏರಿದೆ. ಅಂಕಿಅಂಶಗಳ ಪ್ರಕಾರ ಬುಧವಾರ 19 ಸಾವಿರದ 206 ಜನರು ಗುಣಮುಖರಾಗಿದ್ದಾರೆ.

ಇದುವರೆಗೆ 3 ಕೋಟಿ 43 ಲಕ್ಷದ 411 ಸಾವಿರ 9 ಜನರು ಸೋಂಕು ಮುಕ್ತರಾಗಿದ್ದಾರೆ.

ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ ಇದುವರೆಗೆ 148 ಕೋಟಿಗೂ ಹೆಚ್ಚು ಆಂಟಿ-ಕೊರೊನಾವೈರಸ್ ಲಸಿಕೆಗಳನ್ನು ನೀಡಲಾಗಿದೆ.

ಬುಧವಾರ ಒಂದೇ ದಿನ 91 ಲಕ್ಷದ 25 ಸಾವಿರದ 99 ಡೋಸ್ ನೀಡಲಾಗಿದ್ದು, ನಂತರ 148 ಕೋಟಿ 67 ಲಕ್ಷ 80 ಸಾವಿರದ 227 ಡೋಸ್ ಲಸಿಕೆ ನೀಡಲಾಗಿದೆ.

ರಾಜ್ಯದ ವರದಿ: ಕರ್ನಾಟಕದಲ್ಲೂ ಕೊರೊನ ಸೋಂಕು ಮೇರೆ ಮೀರುತ್ತಿದೆ.

ಬೆಂಗಳೂರು ನಗರದಲ್ಲಿ 24 ಗಂಟೆಯೊಳಗೆ 3,605 ಪ್ರಕರಣ ಕಾಣಿಸಿಕೊಂಡಿದೆ.

ಮೈಸೂರು 59,ದಕ್ಷಿಣ ಕನ್ನಡ 111, ಚಾಮರಾಜನಗರ 2, ಕೊಡಗು 20, ಹಾಸನ 20, ಮಂಡ್ಯ 36, ಬಾಗಲಕೋಟೆ 6, ಬಳ್ಳಾರಿ 34, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 19, ಬೀದರ್ 3 ಪ್ರಕರಣಗಳು ವರದಿಯಾಗಿದೆ.

ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 12, ಚಿತ್ರದುರ್ಗ 6, ದಾವಣಗೆರೆ 2, ಧಾರವಾಡ 26, ಗದಗ 5, ಕಲುಬುರಗಿ 28, ಕೋಲಾರ 24, ರಾಮನಗರ 4, ಶಿವಮೊಗ್ಗ 22, ತುಮಕೂರು 43, ಉಡುಪಿ 88, ಉತ್ತರಕನ್ನಡ 17, ವಿಜಯಪುರ 14 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 4,246 ಪ್ರಕರಣಗಳು ದೃಢಪಟ್ಟಿದ್ದು, 362 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ 30,17,372 ಮಂದಿಗೆ ಕೊರೊನಾ ದೃಢಪಟ್ಟಿದ್ದು, 29,61,772 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 17,414 ಸಕ್ರಿಯ ಪ್ರಕರಣಗಳಿವೆ.  ಇಬ್ಬರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 38,357 ಮಂದಿ ಸಾವನ್ನಪ್ಪಿದ್ದಾರೆ.

ಅದರೆ, ಯಾದಗಿರಿ, ಹಾವೇರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ.

ಮೈಸೂರು ಜಿಲ್ಲೆಯಲ್ಲಿ ಬುಧವಾರ 59 ಮಂದಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 1,80,445 ಸೋಂಕಿತರು ಪತ್ತೆಯಾಗಿದ್ದು 1,77.805 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 215 ಸಕ್ರಿಯ ಪ್ರಕರಣಗಳಿದ್ದು, ಮೈಸೂರಿನಲ್ಲಿ ಈವರೆಗೆ 2,428 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.