ನವದೆಹಲಿ: ದೇಶದಲ್ಲಿ ಕೊರೋನಾದ ಮೂರನೇ ಅಲೆ ದಾಂಗುಡಿ ಇಟ್ಟಿದ್ದು ಅದರ ವೇಗವನ್ನು ನಿಯಂತ್ರಿಸಲಾಗುತ್ತಿಲ್ಲ ಹಾಗಾಗಿ ತೀವ್ರ ಆತಂಕ ಎದುರಾಗಿದೆ.
ಕೊರೊನಾ ವೈರಸ್ ಕಳೆದ 24 ಗಂಟೆಗಳಲ್ಲಿ 1 ಲಕ್ಷ 79 ಸಾವಿರದ 729 ಹೊಸ ಪ್ರಕರಣಗಳು ದಾಖಲಾಗಿದ್ದು,146 ಜನರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 3 ಕೋಟಿ 57 ಲಕ್ಷ 7 ಸಾವಿರದ 727 ಕ್ಕೆ ಏರಿಕೆಯಾಗಿದ್ದರೆ ರೋಗದಿಂದ ಇದುವರೆಗೆ 4 ಲಕ್ಷ 83 ಸಾವಿರ 936 ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷ 23 ಸಾವಿರ 619 ಕ್ಕೆ ಏರಿದೆ.ಇದುವರೆಗೆ 3 ಕೋಟಿ 45 ಲಕ್ಷ 172 ಜನರು ಕೊರೋನಾ ಸಾಂಕ್ರಾಮಿಕದಿಂದ ಗುಣಮುಖರಾಗಿದ್ದಾರೆ.
ಓಮಿಕ್ರಾನ್ ನ ಹೆಚ್ಚಿದ ಆತಂಕದ ನಡುವೆಯೇ ಕೊರೋನಾದ ಅನಿಯಂತ್ರಿತ ವೇಗದ ನಡುವೆ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ.
ಇಲ್ಲಿಯವರೆಗೆ 151 ಕೋಟಿ ವ್ಯಾಕ್ಸಿನೇಷನ್ ಡೋಸ್ ನೀಡಲಾಗಿದೆ.ಭಾನುವಾರದವರೆಗೆ 69 ಕೋಟಿ 15 ಲಕ್ಷ 75 ಸಾವಿರದ 352 ಮಾದರಿ ಪರೀಕ್ಷೆ ಮಾಡಲಾಗಿದೆ.

