ಉಕ್ರೇನ್ ನಲ್ಲಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ -ಸಿಎಂ ಬೊಮ್ಮಾಯಿ

ಬೆಂಗಳೂರು: ಉಕ್ರೇನ್ ನಲ್ಲಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ವಿದೇಶಾಂಗ ಇಲಾಖೆ ಜತೆ ನಿರಂತರ ಸಂಪರ್ಕದಲ್ಲಿದ್ದೇನೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಇಂದು ಬೆಳಿಗ್ಗೆ ವಿದೇಶಾಂಗ ಸಚಿವರ ಜೊತೆ ಮಾತನಾಡಿದ್ದೇನೆ, ಉಕ್ರೇನ್ ನಲ್ಲಿರುವ ಕನ್ನಡಿಗರ ಸ್ಥಿತಿ-ಗತಿಗಳನ್ನು ವಿಚಾರಿಸಿದ್ದೇನೆ. ಅಲ್ಲಿಂದ ನಮ್ಮವರನ್ನು ಕರೆತರಲು ಭಾರತ ಸರ್ವ ಪ್ರಯತ್ನ ಮಾಡುತ್ತಿದೆ ಎಂದರು.

ಕನ್ನಡಿಗರು ಉಕ್ರೇನ್ ನಲ್ಲಿ ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನೋ ಮಾಹಿತಿ ಸಂಗ್ರಹ ಆಗಿದೆ. ಊಟ ಮತ್ತು ಎಲ್ಲಾ ವ್ಯವಸ್ಥೆ ಮಾಡಬೇಕೆಂದು ಕೋರಿದ್ದೇನೆ. ಯುದ್ಧ ವಾತಾವರಣ ಇರೋದ್ರಿಂದ ಇದ್ದಲ್ಲೇ ಇರಲು ಸೂಚಿಸಿದ್ದೇವೆ ಎಂದಿದ್ದಾರೆಂದವರು ತಿಳಿಸಿದರು.

ಇಲ್ಲಿಯವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿದ ಮಾಹಿತಿ ಇಲ್ಲ. ಸಾಕಷ್ಟು ಮಕ್ಕಳು ಮೆಡಿಕಲ್ ಕಲಿಯಲು ಉಕ್ರೇನ್ ಗೆ ತೆರಳಿದ್ದರು. ಎಲ್ಲ ವಿದ್ಯಾರ್ಥಿಗಳೂ ಇಂಡಿಯನ್ ಎಂಬೆಸಿ ಸಂಪರ್ಕದಲ್ಲಿದ್ದಾರೆಂದು ತಿಳಿಸಿದ್ದಾರೆಂದರು.