ಅಧಿಕಾರದಲ್ಲಿದ್ದಾಗ ಮೇಕೆದಾಟು ಬಗ್ಗೆ ಯೋಚಿಸದೇ ಈಗ ಪಾದಯಾತ್ರೆ ನಾಟಕ-ಕಾರಜೋಳ

ಬೆಳಗಾವಿ: ಮೇಕೆದಾಟು ವಿಚಾರ ಸುಪ್ರೀಕೋರ್ಟನಲ್ಲಿ ಬಾಕಿ ಇರುವಾಗ ಕಾಂಗ್ರೆಸ್ ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯರಾದ ಸುರ್ಜೇವಾಲಾ ಅವರು  ಈ ಪಾದಯಾತ್ರೆಯಲ್ಲಿ ಸೇರಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದು ಹೇಳಿದರು.

ಕಾಂಗ್ರೆಸ್  5 ವರ್ಷ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಯೋಚಿಸದೇ ಈಗ ಪಾದಯಾತ್ರೆ ನಾಟಕ ಮಾಡುತ್ತಿದೆ ಎಂದು  ಟೀಕಿಸಿದರು.

ಹೊಟ್ಟೆಪಾಡಿಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ನನ್ನನ್ನು ವೈಯಕ್ತಿಕವಾಗಿ ಹೀಗಳೆಯುತ್ತಿರುವುದು ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರಾವರಿಗೆ ಶೋಭೆ ತರುವುದಿಲ್ಲ, ಹಿರಿಯ ರಾಜಕಾರಣಿಯ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡುವಾಗ ಸ್ವಲ್ಪ ಯೋಚಿಸಬೇಕು ಎಂದು ಹೇಳಿದರು.