ತೃತೀಯ ಲಿಂಗಿ ಮಗುವಿಗೆ ಬೆಳ್ಳಿ, ಬಂಗಾರ ಬೇಡ ವಿದ್ಯೆ ನೀಡಿ -ಮಂಜಮ್ಮ ಜೋಗತಿ

ಮೈಸೂರು: ಅಡುಗೆ ಮನೆಯಲ್ಲಿ ಸೌಟು ಹಿಡಿಯುತ್ತಿದ್ದ ಮಹಿಳೆಯರು ಇಂದು ವಿಮಾನವನ್ನು ಮುನ್ನಡೆ ಸುತ್ತಿದ್ದಾರೆ,ಇದು ಹೆಮ್ಮೆಯ ವಿಚಾರ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀ ದುರ್ಗ ಫೌಂಡೇಷನ್ ವತಿಯಿಂದ ಏರ್ಪಡಿಸ ಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರಶಸ್ತಿಗಳು ಸ್ವೀಕರಿಸಿದ್ದೇವೆ ಎಂದರೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಇಂದು ನೀವು ಮಾಡಿರುವ ಸೇವಾ ಕಾರ್ಯಗಳಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಿಸ್ತಿ ನೀಡಿ ಗೌರವಿಸಲಾಗುತ್ತಿದೆ. ನೀವು ಕಾರ್ಯಗಳನ್ನು ಮುಂದುವರೆಸಿದರೆ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಲಿದೆ ಎಂದು ಪ್ರೋತ್ಸಾಹ ನೀಡಿದರು.

50 ವರ್ಷಗಳ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆಯದಿದ್ದರೆ. ಒಬ್ಬ ತೃತೀಯ ಲಿಂಗಿಗೆ

ಪದ್ಮಭೂಷಣ ಪ್ರಶಸ್ತಿ ದೊರಕಲು ಸಾಧ್ಯವಾಗುತ್ತಿ ರಲಿಲ್ಲ. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ದೊರಕುತ್ತಿರಲಿಲ್ಲ. ಆದರೆ ಇಂದಿನ ಕಾರ್ಯಕ್ರಮ ನೋಡುತ್ತಿದ್ದರೆ, ಅವರ ಕನಸು ನನಸಾಗಿದೆ ಅವರ ಆತ್ಮಕ್ಕೆ ಶಾಂತಿ ದೊರಕಿದೆ ಅನಿಸುತ್ತಿದೆ ಎಂದರು.

ನಿಮ್ಮ ಮನೆಯಲ್ಲಿ ತೃತೀಯಲಿಂಗಿ ಮಗು ಜನಿಸಿದರೆ ಅದನ್ನು ಮನೆಯಿಂದ ಹೊರಗೆ ಕಳಿಸಬೇಡಿ .ಅವರಿಗೆ ಮನೆ, ಬೆಳ್ಳಿ, ಬಂಗಾರ ನೀಡಬೇಡಿ  ವಿದ್ಯಾಭ್ಯಾಸ ನೀಡಿ ಎಂದು ಮಂಜಮ್ಮ ಜೋಗತಿ ಮನವಿ ಮಾಡಿದರು.

70ಕ್ಕೂ ಹೆಚ್ಚು ಮಹಿಳೆ ಯರಿಗೆ “ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು

ಕಿರುತೆರೆ ನಟಿ ವಾಣಿಶ್ರೀ ಹಾಗೂ ನಟ ಚಂದನ್ ಗೌಡ ,ಉದ್ಯಮಿ ಲಾವಣ್ಯ ಕಿಶೋರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್,ಸುಯೋಗ್ ಆಸ್ಪತ್ರೆಯ ಮುಖ್ಯಸ್ಥ ಡಾ. ಎಸ್. ಪಿ. ಯೋಗಣ್ಣ , ಸಮಾಜ ಸೇವಕರ ಕೆ. ರಘುರಾಂ ವಾಜಪೇಯಿ ,ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ,ಕಾಂಗ್ರೆಸ್ ಮುಖಂಡರಾದ ರಾಜಾರಾಂ, ಎನ್. ಎಂ. ನವೀನ್ ಕುಮಾರ್ ,ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ,ಕವಿತಾ ರೆಡ್ಡಿ ,ಪ್ರಭಾವತಮ್ಮ,ಕವಿತಾ, ಅರ್ಚನಾ ಪ್ರಕಾಶ್ ,ಮಹೇಶ್ ಕಾಮತ್ ,ಸಪ್ನಾ ಸಂತೋಷ್  ಮತ್ತಿತರರು ಹಾಜರಿದ್ದರು.