ಬಾಂಬ್ ಬೆದರಿಕೆ: ದೆಹಲಿ,ಯಪಿಯಲ್ಲಿ ಹೈ ಅಲರ್ಟ್

ನವದೆಹಲಿ: ಇಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಬೆದರಿಕೆಯಿಂದಾಗಿ ಸ್ಥಳೀಯ ಪೊಲೀಸರು ಸರೋಜಿನಿ ನಗರ ಮಾರುಕಟ್ಟೆಯನ್ನು ಮುಚ್ಚಿದ್ದಾರೆ.

ಇಮೇಲ್ ಕಳುಹಿಸಿರುವ ವ್ಯಕ್ತಿ ತೆಹ್ರೀಕ್-ಎ-ತಾಲಿಬಾನ್ ಇಂಡಿಯಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರವುದಾಗಿ ಹೇಳಿಕೊಂಡಿದ್ದಾನೆ.

ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.