ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್ ಳನ್ನು ತನಿಖೆಗೆ ಒಳಪಡಿಸಲು ಆಗ್ರಹ

ಬೆಂಗಳೂರು: ಅಲ್ಲಾ ಹೋ ಅಕ್ಬರ್ ಎಂದು ಕೂಗಿದ್ದ ಮಂಡ್ಯ ಪಿ.ಇ.ಎಸ್  ಕಾಲೇಜಿನ ವಿದ್ಯಾರ್ಥಿನಿ ಮಸ್ಕಾನ್‍ ಳನ್ನು ತನಿಖೆಗೆ ಒಳಪಡಿಸಬೇಕೆಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಂಸದ ಅನಂತಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.

ಹಿಜಾಬ್ ವಿವಾದದ ವೇಳೆ ಕಾಲೇಜಿನ ಮುಂಭಾಗದಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಆಕೆಯ ಮುಂದೆ ಜೈ ಶ್ರೀರಾಮ ಘೋಷಣೆ ಕೂಗಿದ್ದಾಗ, ಮಸ್ಕಾನ್  ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಳು.

ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಯುವತಿಯನ್ನು ಭಾರತದ ಶ್ರೇಷ್ಠ ಮಹಿಳೆ ಎಂದು ಹೇಳಿ ಅಲ್ ಖೈದಾ ಭಯತ್ಪಾದಕ ಸಂಘಟನೆಯ ಮುಖ್ಯಸ್ಥ ‌ ‌  ಆಯಮನ್-ಅಲ್-ಜವಾಹರಿ  ಹೊಗಳಿದ್ದ.

ಮಸ್ಕಾನ್ ಹಾಗೂ ಕಾಣದ ಕೈಗಳು ಮತ್ತು ನಿಷೇಧಿತ ಮುಸ್ಲಿಂ ಸಂಘಟನೆ ಜೊತೆ ಇರುವ ಸಂಬಂಧದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿ ಅನಂತ್ ಕುಮಾರ್ ಹೆಗಡೆ ಸಿಎಂಗೆ ಪತ್ರ ಬರೆದಿದ್ದಾರೆ.