ಮಂಗಳೂರು: ಮಳಲಿ ದರ್ಗಾದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟ ಎಂದು ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಮಾಹಿತಿ ನೀಡಿದ್ದಾರೆ.
ತಾಂಬೂಲಾರೂಢ ರಾಶಿ ಸ್ಥಿರ ಬಂದಾಗ ಪೂರ್ಣ ಮಾಹಿತಿ ಸಿಗುತ್ತೆ. ಆ ಜಾಗದವರು ದೇವ ಸಾನಿಧ್ಯದ ಅಭಿವೃದ್ಧಿಗೆ ಮುಂದಾಗಬೇಕು, ಆ ಜಾಗದ ಪತ್ತೆ ಪ್ರಯತ್ನಕ್ಕೆ ದೈವಾನುಗ್ರಹ ಪೂರ್ಣವಿದೆ. ಈತನಕ ನನಗೆ ಈ ರಾಶಿ ಸಿಕ್ಕಿಲ್ಲ, ಪೂರ್ವ ಕಾಲದಲ್ಲಿ ದೈವ ಸ್ಥಾನ ಇತ್ತು, ಎತ್ತರದ ಪ್ರದೇಶದಲ್ಲಿ ಮಹಾಪುರುಷ ತಪಸ್ಸು ಮಾಡಿದ್ದಾನೆ. ವಿವಾದಿತ ಜಾಗದ ಉತ್ತರ ದಿಕ್ಕಿನಲ್ಲಿ ಗುರು ತಪಸ್ಸು ಮಾಡಿದ್ದಾನೆ ಎಂದು ತಾಂಬೂಲ ಪ್ರಶ್ನೆಯ ವೇಳೆ ಪೆÇದುವಾಳ್ ಗೋಪಾಲಕೃಷ್ಣ ತಿಳಿಸಿದ್ದಾರೆ.
ಮಳಲಿ ದರ್ಗಾದಲ್ಲಿ ಶಿವ ಸಾನಿಧ್ಯದ ಕುರುಹು ಪತ್ತೆಯಾಗಿದ್ದು, ಮಠದ ರೂಪದಲ್ಲಿ ದೈವ ಸಾನಿಧ್ಯದ ಮಾಹಿತಿ ಲಭ್ಯವಾಗಿದೆ. ಲಿಂಗಾಯತ ಮಠದ ಸ್ವರೂಪದಲ್ಲಿ ಕುರುಹು ಪತ್ತೆಯಾಗಿದ್ದು, ವಿವಾದಿತ ಸ್ಥಳದಲ್ಲಿ ಜಪ-ತಪ ಮಾಡಿರುವ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಉತ್ತರ ಸಿಕ್ಕಿದೆ ಎಂದು ಕೇರಳದ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದ್ದಾರೆ.
ಊರಿಗೆ ಯಾವುದೇ ತೊಂದರೆ ಆಗಬಾರದು, ವಿವಾದವನ್ನು ಕೆದಕಿದ್ದೀರಿ. ಇದಕ್ಕೊಂದು ಉತ್ತರ ಪಡೆದುಕೊಳ್ಳಿ, ಪುನರ್ ಪ್ರತಿಷ್ಠಾಪನೆ ಮಾಡಿದರೆ ಊರಿಗೆ ಒಳಿತಾಗುತ್ತದೆ. ಮಳಲಿ ಮಠದಲ್ಲಿ ದೈವೀ ಶಕ್ತಿಯ ಗೋಚರವಾಗಿದೆ. ಕೆರೆ-ಬಾವಿ ಹಾಳಾಗಿರುವ ಸಂಕೇತ ವೀಳ್ಯದೆಲೆ ಪ್ರಶ್ನೆಯಲ್ಲಿ ಉತ್ತರ ನೀಡಲಾಗಿದೆ.

