ಚಿನ್ನ, ವಜ್ರ, ವೈಢೂರ್ಯ, ಮುತ್ತು, ರತ್ನ, ಚಿನ್ನದ ಹೂಗಳಿಂದ ಗಣಪತಿ ಶ್ರೀಗಳಿಗೆ ಪಾದಪೂಜೆ

ಮೈಸೂರು: ಮೇ 26 ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಜನಿಸಿದ ದಿನ.

ಈ ಪ್ರಯುಕ್ತ ಗುರುವಾರ ಬೆಳಿಗ್ಗೆ ಆಶ್ರಮದಲ್ಲಿ ಶ್ರೀಚಕ್ರಪೂಜೆ, ಆಯುಷ್ಯ ಹೋಮ ನೆರವೇರಿಸಲಾಯಿತು.

ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆಯನ್ನು ಕಿರಿಯಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನೆರವೇರಿಸಿದರು.

ಚಿನ್ನ, ವಜ್ರ, ವೈಡೂರ್ಯ, ಮುತ್ತು, ರತ್ನ, ಚಿನ್ನದ ಹೂಗಳು ಅಲ್ಲದೆ ವಿವಿಧ ಬಗೆಯ ಪುಷ್ಪಗಳಿಂದ ಕಿರಿಯ ಶ್ರೀಗಳು ಅತ್ಯಂತ ವೈಭವದಿಂದ ಪಾದಪೂಜೆ ನೆರವೇರಿಸಿದರು.

ಇದನ್ನು ಸಾವಿರಾರು ಭಕ್ತರು ಕಣ್ ತುಂಬಿಕೊಂಡರು. ಅಲ್ಲದೆ ಸ್ವಾಮೀಜಿಯವರಿಗೆ ವಾದ್ಯ ವಾದನದೊಂದಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಲಾಯಿತು.

ಈ ವೇಳೆ ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ, ದುರ್ಗಾದೇವಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದ ತೀರ್ಥವನ್ನು ಶ್ರೀ ಸ್ವಾಮೀಜಿಯವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀಗಳಿಗೆ ಕೊಡುಗೆಗಳನ್ನು ಭಕ್ತರು ನೀಡಿದರು.

ಇದೇ ವೇಳೆ ಮೈಸೂರು ವಿವಿ ಉಪಕುಲಪತಿ ಹೇಮಂತ್ ಮತ್ತಿತರರ ಗಣ್ಯರು ಹಾಜರಿದ್ದರು.

ಭಗವದ್ಗೀತೆಗೆ ಶ್ರೀ ಸ್ವಾಮೀಜಿಯವರು ಸವಿಸ್ತಾರ ವ್ಯಾಖ್ಯಾನ ಮಾಡಿರುವ ಗೀತಾ ಸ್ವರಪ್ರಸ್ಥಾರ ಗ್ರಂಥವನ್ನು ಶ್ರೀಗಳು ಬಿಡುಗಡೆ ಮಾಡಿದರು. ಈ ಗ್ರಂಥವು ಎರಡು ಸಾವಿರ ಪುಟಗಳು ಹಾಗೂ ಮೂರು ಸಂಪುಟಗಳನ್ನು ಹೊಂದಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.