ಬೆಂಗಳೂರು: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.61.88ರಷ್ಟು ಫಲಿತಾಂಶ ಬಂದಿದೆ ಈಗಲೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗ ಶೇ.48.71, ವಾಣಿಜ್ಯ ವಿಭಾಗದಲ್ಲಿ ಶೇ.64.97 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.72.53 ಸೇರಿದಂತೆ ಒಟ್ಟು ಈ ಬಾರಿ ಶೇ.61.88ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಯಲ್ಲಿ ಪ್ರಕಟಿಸಿದರು.
5,99,794 ಹೊಸ ವಿದ್ಯಾರ್ಥಿಗಳ ಪೈಕಿ 4,02,697 ( ಶೇ.67.14ರಷ್ಟು)ಮಕ್ಕಳು ತೇರ್ಗಡೆಯಾಗಿದ್ದಾರೆ.
ಪುನಾವರ್ತಿತ 61,838 ವಿದ್ಯಾರ್ಥಿಗಳ ಪೈಕಿ 14,403 ವಿದ್ಯಾರ್ಥಿಗಳು (ಶೇ.23.29) ಹಾಗೂ 21,931 ಖಾಸಗಿ ಅಭ್ಯರ್ಥಿಗಳ ಪೈಕಿ 5,866 ಮಂದಿ(ಶೇ.26.75) ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಈ ಬಾರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿವೆ ಎಂದು ಸಚಿವರು ಹೇಳಿದರು.
ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು ತೇರ್ಗಡೆಯಾಗಿದ್ದಾರೆ.ಅದೇರೀತಿ ಕನ್ನಡ ಮಾಧ್ಯಮ ಮಕ್ಕಳಿಗಿಂತ ಆಂಗ್ಲ ಮಾಧ್ಯಮ ಮಕ್ಕಳು ಹೆಚ್ಚು ಉತ್ತೀರ್ಣರಾಗಿದ್ದಾರೆ.
ಡಿಸ್ಟಿಂಕ್ಷನ್ ನಲ್ಲಿ 91106 ಮಕ್ಕಳು, ಫಸ್ಟ್ ಕ್ಲಾಸ್ ನಲ್ಲಿ 214115 ಮಕ್ಕಳು, ಸೆಕೆಂಡ್ ಕ್ಲಾಸ್ ನಲ್ಲಿ 68444 ಹಾಗೂ ಥರ್ಡ್ ಕ್ಲಾಸ್ ನಲ್ಲಿ 49301 ಮಕ್ಕಳು ತೇರ್ಗಡೆಯಾಗಿದ್ದಾರೆ ಎಂದು ನಾಗೇಶ್ ತಿಳಿಸಿದರು.
ಫಲಿತಾಂಶ ತಿಳಿಯಲು ವೆಬ್‌ಸೈಟ್ ಲಿಂಕ್.: Karnataka Examination Results 2022 (karresults.nic.in)
ಸುದ್ದಿಗೋಷ್ಠಿಯಲ್ಲಿ ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ಉಪಸ್ಥಿತರಿದ್ದರು.

