ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಖ್ ನೀಡಿದ ಎಸಿಬಿ ಅಧಿಕಾರಿಗಳು

ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ 21 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

80 ಸ್ಥಳಗಳಲ್ಲಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಶೋಧ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದೆ.

ಭೀಮಾ ರಾವ್ ವೈ ಪವಾರ್ .  ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್.  ಬೆಳಗಾವಿ,ಹರೀಶ್ ಸಹಾಯಕ ಇಂಜಿನಿಯರ್  ಸಣ್ಣ ನೀರಾವರಿ,ಉಡುಪಿ, ರಾಮಕೃಷ್ಣ ಎಚ್.ವಿ.  ಎಇಇ.ಮೈನರ್ ನೀರಾವರಿ ಹಾಸನ,ರಾಜೀವ್ ಪುರಸಯ್ಯ ನಾಯಕ್  ಸಹಾಯಕ ಇಂಜಿನಿಯರ್.ಪಿಡಬ್ಲ್ಯಡಿ  ಕಾರವಾರ,ಬಿ. ಆರ್. ಬೋಪಯ್ಯ  ಜೂನಿಯರ್ ಇಂಜಿನಿಯರ್  ಪೊನ್ನಂಪೇಟೆ ಜಿಲ್ಲಾ ಪಂಚಾಯತ್.

ಮಧುಸೂಧನ್  ಜಿಲ್ಲಾ ನೋಂದಣಾಧಿಕಾರಿ.  ಐ ಜಿ ಆರ್ ಕಛೇರಿ. ಬೆಳಗಾವಿ,  ಪರಮೇಶ್ವರಪ್ಪ ಸಹಾಯಕ ಇಂಜಿನಿಯರ್  ಸಣ್ಣ ನೀರಾವರಿ  ಹೂವಿನಹಡಗಲಿ, ಯೆಲ್ಲಪ್ಪ ಎನ್ ಪಡಸಾಲಿ ಆರ್ ಟಿ ಒ ಬಾಗಲಕೋಟೆ, ಶಂಕರಪ್ಪ ನಾಗಪ್ಪ ಗೋಗಿ ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ ಬಾಗಲಕೋಟೆ, ಪ್ರದೀಪ್ ಎಸ್ ಆಲೂರ್  ಪಂಚಾಯತ್ ಗ್ರೇಡ್ ಟು ಕಾರ್ಯದರ್ಶಿ.  ಆರ್ ಡಿ ಪಿ ಆರ್ ಗದಗ,ಸಿದ್ದಪ್ಪ ಟಿ ಉಪ ಮುಖ್ಯ ವಿದ್ಯುತ್ ಅಧಿಕಾರಿ.ಬೆಂಗಳೂರು, ತಿಪ್ಪಣ್ಣ ಪಿ ಸಿರಸಗಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಬೀಳಗಿ.

ಮೃತ್ಯುಂಜಯ ಚೆನ್ನಬಸಯ್ಯ ತಿರಾಣಿ   ಸಹಾಯಕ ಕಂಟ್ರೋಲರ್.  ಕರ್ನಾಟಕ ಪಶುವೈದ್ಯಕೀಯ , ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ  ಬೀದರ್, ಮೋಹನ್ ಕುಮಾರ್ ಕಾರ್ಯನಿರ್ವಾಹಕ ಇಂಜಿನಿಯರ್ ನೀರಾವರಿ ಚಿಕ್ಕಬಳ್ಳಾಪುರ ಜಿಲ್ಲೆ, ಶ್ರೀಧರ್ ಜಿಲ್ಲಾ ನೋಂದಣಾಧಿಕಾರಿ ಕಾರವಾರ, ಮಂಜುನಾಥ್ ಜಿ. ನಿವೃತ್ತ ಇಇ‌ ಪಿಡಬ್ಲ್ಯುಡಿ, ಶಿವಲಿಂಗಯ್ಯ  ಸಿ ಗ್ರೂಪ್ ಬಿಡಿಎ, ಉದಯ ರವಿ  ಪೊಲೀಸ್ ಇನ್ಸ್‌ಪೆಕ್ಟರ್  ಕೊಪ್ಪಳ,ಬಿ.  ಜಿ.ತಿಮ್ಮಯ್ಯ  ಕೇಸ್ ವರ್ಕರ್ ಕಡೂರು ಪುರಸಭೆ, ಚಂದ್ರಪ್ಪ ಸಿ ಹೋಳೇಕರ್  ಯುಟಿಪಿ ಕಚೇರಿ  ರಾಣೆಬೆನ್ನೂರು, ಜನಾರ್ಧನ್ ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ)  ಬೆಂಗಳೂರು.

ಈ ಅಧಿಕಾರಿಗಳ ಮನೆಗಳು ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿದಿದ್ದು ಅಪಾರ ಪ್ರಮಾಣದ ಹಣ ,ಆಭರಣ ಮತ್ತು‌ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರತಿ ಬಾರಿ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ರೈಡ್ ಮಾಡುತ್ತಲೇ ಇರುತ್ತಾರೆ.ಆದರೆ ಇದುವರೆಗೆ ಒಬ್ಬ ಅಧಿಕಾರಿಗೂ ಶಿಕ್ಷೆ ನೀಡಿಲ್ಲ,ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.ನೆಪ ಮಾತ್ರಕ್ಕೆ ದಾಳಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.