ಮೈಸೂರು: ದಕ್ಷಿಣ ಪದವೀಧರ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು,ಕಾಂಗ್ರೆಸ್ ಅಭ್ಯರ್ಥಿ
ಮಧು ಜಿ. ಮಾದೇಗೌಡ ಅವರು 12205 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮಧು ಜಿ. ಮಾದೇಗೌಡ ಪಡೆದ ಒಟ್ಟು ಮತಗಳು 45275.
ಗೆಲುವಿಗೆ ನಿಗದಿಯಾದ 46083ಮತಗಳ ಕೋಟವನ್ನ ತಲುಪಲು ಮಧು ಅವರಿಗೆ 808 ಮತಗಳ ಕೊರತೆ ಎದುರಾಗಿತ್ತು.
ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮೈ. ವಿ. ರವಿಶಂಕರ್ ಅವರನ್ನು ಎಲಿಮಿನೇಟ್ ಮಾಡಿ ಅಲ್ಲಿಂದ 808 ಪಡೆಯಲಾಯಿತು.
ಬಿಜೆಪಿ ಒಟ್ಟು 33878 ಮತ ಪಡೆದು ಬಿ.ಜೆಪಿಯ ಮೈ.ವಿ. ರವಿಶಂಕರ್ ಸೋಲನುಭವಿಸಿದರು.
ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19630 ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.
ಒಟ್ಟಾರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಪಡೆದಂತಾದರೆ ಜೆಡಿಎಸ್ ಒಂದೂ ಸ್ಥಾನ ಪಡೆಯಲಾಗದೆ ಸೋಲನುಭವಿಸಿದೆ.

