ಮೈಸೂರು: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೈಸೂರು ವತಿಯಿಂದ ಚಾಮುಂಡಿ ಬೆಟ್ಟದ ದೇವಿಕೆರೆ ಹಾಗೂ ಹಿರೇಕೆರೆಯ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ತಾಯಿ ಚಾಮುಂಡೇಶ್ವರಿ ಅಭಿಷೇಕಕ್ಕಾಗಿ ಪ್ರತಿದಿನ ದೇವಿ ಕೆರೆಯಿಂದ ನೀರನ್ನು ತೆಗೆದುಕೊಂಡು ಹೋಗಲಾಗುತ್ತದೆ.
ದೇವಿಕೆರೆಯಲ್ಲಿ ಇರುವ ಹೂಳು ತೆಗೆದು ಕುಲುಶಿತವಾಗಿರುವ ನೀರನ್ನು ಶುಚಿಗೊಳಿಸಬೇಕಿದೆ.
ದೇವಿಕೆರೆಯಿಂದ ಚಾಮುಂಡಿ ದೇವಸ್ಥಾನದವರಿಗೆ ಇರುವ ಎಲ್ಲ ಮಾರ್ಗಗಳು ಶಿತಿಲವಾಗಿದೆ.
ನೀರನ್ನು ಹಿಡಿದುಕೊಂಡು ಮೇಲೆ ಹತ್ತುಲು ಅನುಕೂಲವಾಗಲೆಂದು ರೈಲಿಂಗ್ಸ್ ಆಳವಡಿಸಲಾಗುವುದು.
ಎತೇಚ್ಚವಾಗಿ ಕೊಳಕ್ಕೆ ನೀರು ಬರುವಹಾಗೆ ಮಾಡುವ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ನೂರಕ್ಕಿಂತಲೂ ಹೆಚ್ಚು ಪುಟ್ಟ ಪುಟ್ಟ ಕೊಳಗಳಿರುವುದು ನಕ್ಷೆಯಲ್ಲಿ ಕಂಡುಬಂದಿದೆ.
2ನೇ ಹಂತದಲ್ಲಿ ಕೊಳಗಳನ್ನು ಕೂಡ ಶಾಶ್ವತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಆಷಾಡ ಮಾಸದ ಎರಡನೆಯ ಶುಕ್ರವಾರ ಅಂದರೆ ಜುಲೈ 8ನೇ ತಾರೀಕು ತಾಯಿ ದರ್ಶನ ಪಡೆಯಲು ಬರುವ ಭಕ್ತಾದಿಗಳು ತಮ್ಮ 1 ಗಂಟೆಗಳ ಕಲಾಸೇವೆಯನ್ನು ಮಾಡುವ ಮೂಲಕ ಸ್ವಚ್ಛತೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಾರ್ಥನೆ ಮಾಡುತ್ತೇನೆ ಎಂದು ರಾಮದಾಸ್ ತಿಳಿಸಿದರು.
ದೇವಾಲಯದ ಹಿರಿಯ ಪುರೋಹಿತರಾದ ಶಶಿಶೇಖರ್ ದೀಕ್ಷಿತ್ ಪೂಜಾಕಾರ್ಯ ನೆರವೇರಿಸಿದರು.
ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭರತ್ ಕಾಳಯ್ಯ, ಸದಸ್ಯನವಿಲು ನಾಗರಾಜು, ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿಗಳು ಹಾಜರಿದ್ದರು.

