ರಾಜಾಸ್ಥಾನ: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಟೈಲರ್ ಒಬ್ಬರ ಶಿರಚ್ಛೇದ ಮಾಡಿ ಇಬ್ಬರು ಮುಸ್ಲಿಮರು ವಿಕೃತಿ ಮೆರೆದ ಘಟನೆಯಿಂದ ರಾಜಾಸ್ಥಾನದ ಉದಯಪುರ ಹೊತ್ತಿ ಉರಿದಿದೆ.
ಕನ್ನಯ್ಯಲಾಲ್ ಎಂಬಾತನನ್ನು ಹತ್ಯೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಪಾಪಿಗಳು ವಿಕೃತಿ ಮೆರೆದಿದ್ದರು.
ವಿಷಯ ಹರಡುತ್ತಿದ್ದಂತೆ ಉದಯಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಬೂದಿ ಮುಚ್ಚಿದ ಕೆಂಡದಂತಿದೆ.
ಹಿಂದೂಪರ ಸಂಘಟನೆಗಳು ಕಲ್ಲುತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದವು.ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದ್ದರಿಂದ ಅಘೋಷಿತ ಬಂದ್ ನಿರ್ಮಾಣವಾಗಿತ್ತು.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಘಟನೆಯನ್ನು ಖಂಡಿಸಿದ್ದಾರೆ.ಇಂತಹ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕೂಡಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕರ್ನಾಟಕದಲ್ಲೂ ನೂಪರ್ ಶರ್ಮಾ ಬೆಂಬಲಿತನ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರು ಕಿಡಿಕಾರಿದ್ದಾರೆ.
ಶಿರಚ್ಛೇದ ಮಾಡಿದವರನ್ನು ಎನ್ ಕೌಂಟರ್ ಮಾಡಿ ಬಿಸಾಡಿ ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಅಂತ್ಯಕ್ರಿಯೆ:- ಬುಧವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಕನ್ನಯ್ಯಲಾಲ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿದ್ದರು.ಈ ವೇಳೆ ಜನತೆ ಕನ್ನಯ್ಯಲಾಲ್ ಹತ್ಯೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಿ, ಸುಮ್ಮನೆ ಬಿಡಬೇಡಿ ಎಂಬ ಘೋಷಣೆ ಕೂಗಿದರು.
ಕನ್ನಯ್ಯಲಾಲ್ ಅವರ ಮನೆಯವರು ಕೊಲೆಗಡುಕರನ್ನು ನೇಣಿಗೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಘಟನೆಯ ತನಿಖೆಯನ್ನು ಎನ್ ಐ ಎ ಗೆ ಸರ್ಕಾರ ವಹಿಸಿದೆ.

