ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಈ ಸಂಬಂಧ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಡಿಕೆಶಿ, ಹೌದು ಬಾಂಬ್‌ ಬೆದರಿಕೆ ಬಂದಿರುವುದು ನಿಜ.ಬಾಂಬ್ ನಿಷ್ಕ್ರಿಯ ‌ದಳ ಹಾಗೂ ಪೊಲೀಸರು ತಕ್ಷಣ ಅಲರ್ಟ್ ಆಗಿ ಶಾಲೆಯಲ್ಲಿ ಪೂರ್ಣ ತಪಾಸಣೆ ನಡೆಸಿದರೆಂದು ತಿಳಿಸಿದರು.

ಇದು ಖಂಡಿತಾ ಹುಸಿ ಕರೆ.ಯಾರೋ ಕುಚೋದ್ಯಕ್ಕೆ ಹೀಗೆ ಮಾಡಿದ್ದಾರೆ.ಮಕ್ಕಳು,

ಪೋಷಕರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಹುಚ್ಚ ವೆಂಕಟ್ ಹೆಸರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ.ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಲಾಗಿದೆ.ಇದೊಂದು ಹುಸಿ ಕರೆ ಎಂದು ‌ಡಿಕೆಶಿ ಸ್ಪಷ್ಟಪಡಿಸಿದರು.