ಪ್ಯಾಕ್ಡ್ ಹಾಲು,ಮೊಸರಿಗೆ ಮಾತ್ರ ಜಿ ಎಸ್ ಟಿ: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಹಾಲು , ಮೊಸರನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್‌ಟಿ ಹಾಕಿದ್ದೇವೆ, ಸಾಮಾನ್ಯವಾಗಿ ಮಾರಾಟ ಮಾಡುವವರಿಗೆ ತೆರಿಗೆ ಹಾಕಿಲ್ಲ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಈ ಕುರಿತು ಸಿಎಂ ಮಾತನಾಡಿದರು.

ಬ್ರಾಂಡೆಡ್ ಇದ್ದವರಿಗೆ ಮಾತ್ರ ಶೇ.5  ಜಿಎಸ್‌ಟಿ ಹಾಕಿದ್ದೇವೆ ಅದನ್ನು ಮರುಪಾವತಿ ಮಾಡಲು ಅವಕಾಶವಿದೆ ಹೀಗಾಗಿ ಜಿಎಸ್‌ಟಿ ಇದ್ದರೂ ವಸ್ತುಗಳ ದರ ಹೆಚ್ಚಿಸುವ ಅಗತ್ಯ ವಿರುವುದಿಲ್ಲ ತಿಳಿಸಿದರು.

ಮರುಪಾವತಿ ಮಾಡುವ ಸಾಧ್ಯತೆಯಿದೆ ಇದನ್ನು ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳವಾಗುವುದಿಲ್ಲ ಇದರ ಬಗ್ಗೆ ಗಮನಕೊಡುತ್ತೇನೆ ಎಂದು ಭರವಸೆ ನೀಡಿದರು.

ಜಿಎಸ್‌ಟಿ ಕಾರಣದಿಂದ ದರ ಹೆಚ್ಚಳ ಮಾಡಿದ್ದಾರೆ  ಆದರೆ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ ಶೇ.5 ರಷ್ಟು ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ . ಇದನ್ನು ಜಿಎಸ್‌ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.