ಖಾದ್ಯ ತೈಲ ದರ ಇಳಿಕೆ

ನವದೆಹಲಿ: 200ರ ಗಡಿ ದಾಟಿದ್ದ ಖಾದ್ಯ ತೈಲದ ದರ ಭಾರೀ ಇಳಿಕೆಯಾದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ಇಳಿಕೆಯಾದ ನಂತರ ದೇಶದ ಪ್ರಮುಖ ಖಾದ್ಯ ತೈಲ ಉತ್ಪಾದನಾ ಕಂಪನಿ ಅದಾನಿ ಒಡೆತನದ ಅದಾನಿ ವಿಸ್ಮರ್ ಕಂಪನಿಯು ಫಾರ್ಚೂನ್ ಖಾದ್ಯತೈಲ ಬೆಲೆಯನ್ನು ಪ್ರತಿ ಲೀಟರೆ 30 ರೂ ಇಳಿಕೆ ಮಾಡಿದೆ.

ಇತರ ಕಂಪನಿಗಳು ಇದೇ ಹಾದಿ ಹಿಡಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಬೆಲೆ ಇಳಿಕೆ ಮತ್ತು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ.5 ರಷ್ಟು ಇಳಿಸಿದ ಪರಿಣಾಮ ಫಾರ್ಚೂನ್ ವಿವಿಧ ಮಾದರಿಯ ಖಾದ್ಯ ತೈಲ ಬೆಲೆಯನ್ನು ಲೀಟರೆ 5 ರೂ‌ ನಿಂದ 30 ರೂ ವರೆಗೂ ಇಳಿಸಿದೆ.

ಹೀಗಾಗಿ ಅದಾನಿ ವಿಸ್ಮರ್ ಕಂಪನಿಯ ಸೋಯಾ ಎಣ್ಣೆ ದರ ಲೀ.ಗೆ 195 ರೂ . ನಿಂದ 165 ರೂ.ಗೆ , ಸೂರ್ಯಕಾಂತಿ ಎಣ್ಣೆ 210 ರೂ ನಿಂದ 199 ರೂ.ಗೆ, ಎಳ್ಳೆಣ್ಣೆ 195 ರೂ ನಿಂದ 190 ರೂ.ಗೆ, ಶೇಂಗಾ ಎಣ್ಣೆ 220 ರೂ ನಿಂದ 210 ರೂ ಇಳಿಕೆ ಆಗಲಿದೆ.