ಕಾನೂನಿಗಿಂತ ಸೋನಿಯಾ ಗಾಂಧಿ ದೊಡ್ಡವರಾ: ಪ್ರಹ್ಲಾದ್ ಜೋಶಿ ಕಿಡಿ

ನವದೆಹಲಿ : ಸೋನಿಯಾ ಗಾಂಧಿ ಸೂಪರ್ ಹ್ಯೂಮನ್ ಬೀಯಿಂಗಾ,ಕಾನೂನಿಗಿಂತ ಅವರು ದೊಡ್ಡವರಾ…ಹೀಗೆಂದು

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಕಾಂಗ್ರೆಸ್ ಸದಸ್ಯರು ಹೀಗೆ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನ ವಿರೋಧಿಸಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು.

ಅಸಲಿಗೇ ಇವರಿಗೆ ಏನು ಬೇಕು, ಈಗ ಸೋನಿಯಾ ಗಾಂಧಿ ಪರ ಪ್ರತಿಭಟಿಸುತ್ತಿರುವವರು ಬುಧವಾರ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿದರು.

ಎರಡೂ ಸದನದಗಳ ಸಭಾಧ್ಯಕ್ಷರು ಸ್ವತಃ ಚರ್ಚೆಗೆ ಅವಕಾಶ ನೀಡುವುದಾಗಿ ಹಲವು ಬಾರಿ ಭರವಸೆ ನೀಡಿದರೂ ಸಹ ಇವರುಗಳು ಸುಗಮವಾಗಿ ಸದನ ನಡೆಸಲು ಸಹಕರಿಸುತ್ತಿಲ್ಲ ಎಂದು ಕಿಡಿಕಾರಿದರು.

ಅವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಚರ್ಚೆಯಲ್ಲಿ ಭಾಗವಹಿಸಬೇಕು ಸುಮ್ಮನೆ ಪ್ರತಿಭಟಿಸುವುದು ಸರಿಯಲ್ಲ ಎಂದು ಹೇಳಿದರು.

ಕಾನೂನಿನ ಮುಂದೆ ಎಲ್ಲರೂ ಒಂದೇ.  ಕಾಂಗ್ರೆಸ್ ಅಧ್ಯಕ್ಷರೇನು ಸೂಪರ್ ಹ್ಯೂಮನ್ ಬೀಯಿಂಗಾ,   ಅವರು ಕಾನೂನಿಗಿಂತ ಮೇಲಿದ್ದಾರಾ ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು  ಜೋಶಿ ಟೀಕಿಸಿದರು.