ಗೋಡೆ ಕುಸಿದು ನಾಲ್ಕು ಕಾರ್ಮಿಕರ ದುರ್ಮರಣ

ಹೊಸಕೋಟೆ: ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಮೇಲೆ ವೇರ್ ಹೌಸ್ ನ ಗೋಡೆ ಕುಸಿದು ಬಿದ್ದು ನಾಲ್ಕು ಮಂದಿ ದುರ್ಮರಣ ಹೊಂದಿರುವ ಘಟನೆ ಹೊಸಕೋಟೆ ಸಮೀಪ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಬಿಹಾರದ ಮನೋಜ್‌ಕುಮಾರ್ ಸದಮ್ ( 35 ),ರಾಮಕ್‌ಕುಮಾರ್ ಸದಮ್ ( 25 ) , ನಿತೀಶ್ ಕುಮಾರ್ ಸದೆಯ ( 22 ) ಮೃತಪಟ್ಟಿದ್ದು ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.

ನಿರ್ಮಾಣ ಹಂತದ ಸೌಪರ್ಣಿಕಾ ಬಹುಮಹಡಿ ಅಪಾಟ್‌ರ್ಮೆಂಟ್‌ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ.

ಕಳೆದ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮುಂಜಾನೆ ಮೂರು ಗಂಟೆ ವೇಳೆ ಪಕ್ಕದಲ್ಲಿದ್ದ ಹುಡಾನ್ ಕಂಪನಿಯ ವೇರ್ ಹೌಸ್ ನ ಗೋಡೆ ಶೆಡ್ ಮೇಲೆ ಬಿದ್ದಿದೆ.

ಹಾಲೋಬ್ಲಾಕ್ ಇಟ್ಟಿಗೆಯಿಂದ ನಿರ್ಮಿಸಿದ್ದ ಗೋಡೆ ಬಿದ್ದ ರಭಸಕ್ಕೆ ಗಾಢ ನಿದ್ರೆಯಲ್ಲಿದ್ದ ನಾಲ್ವರು ಕಾರ್ಮಿಕರು ಅವಶೇಷಗಳಡಿಯೇ ಸಿಲುಕಿ ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಗೂ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.