ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ಉಗ್ರರ ಅಡಗು ತಾಣವಾಗಿಬಿಟ್ಟಿದೆಯೇನೊ ಅನಿಸುತ್ತಿದೆ.
ಇದಕ್ಕೆ ಕಾರಣ ಮತ್ತೊಬ್ಬ ಶಂಕಿತ ಉಗ್ರನ ಬಂಧನವಾಗಿರುವುದು.ನಗರದ ಜನತೆ ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಒಂದೆರಡು ತಿಂಗಳ ಹಿಂದೆಯೂ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಆತ ಏಳೆಂಟು ವರ್ಷಗಳಿಂದ ಬೆಂಗಳೂರಿನ ಓಕಳಿಪುರಂನಲ್ಲೇ ವಾಸವಿದ್ದ ಈಗ ಮತ್ತೊಬ್ಬ ಉಗ್ರನ ಬಂಧನವಾಗಿರುವುದು ಜನರ ನಿದ್ದೆಗೆಡಿಸಿದೆ.
ಲಷ್ಕರ್ ಉಗ್ರ ಸಂಘಟನೆಯ ಅಸ್ಸಾಂ ಮೂಲದ ಶಂಕಿತ ಉಗ್ರ ಅಖ್ತರ್ ಹುಸೇನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡವೊಂದರ 3ನೇ ಮಹಡಿಯ ಕೋಣೆಯಲ್ಲಿ ವಾಸವಾಗಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ನನ್ನು ಸಿಸಿಬಿ ಪೊಲೀಸರು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಈತ ವಾಸಿಸುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿ ಲಷ್ಕರ್ ಉಗ್ರರನನ್ನು ಹಿಡಿದಿದ್ದಾರೆ.
ಆರೋಪಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ವಿಚಾರಣೆ ಮುಂದುವರಿದಿದೆ.

