ಬೆಂಗಳೂರು: ಕಾಂಗ್ರೆಸ್ ನ ಮನೆ ಜಗಳ ಈಗ ಬೀದಿ ರಂಪ ಆಗಿದೆ.ಮನೆಯೊಳಗೆ ತೀರ್ಮಾನ ಆಗಬೇಕಿರೋ ವಿಚಾರ ಬೀದಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಆ ಪಕ್ಷದಲ್ಲಿ ಹೈಕಮಾಂಡ್ ಇದೆಯೋ ಇಲ್ಲವೋ ಅನ್ನೋದೇ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನ ಒಬ್ಬ ಶಾಸಕ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಹಾಕುತ್ತಾರೆ. ಪ್ರಾಣ ಇರೋವರೆಗೂ ಮಾತಾಡುವುದಾಗಿ ಸವಾಲ್ ಹಾಕಿದ್ದಾರೆ.
ಶಾಸಕ ಜಮೀರ್ ಅಹಮದ್ ಖಾನ್ ಹಿಂದೆ ದೊಡ್ಡವರಿದ್ದಾರೆ. ಹಾಗಾಗಿ ಅವರು ಹೀಗೆ ಮಾತಾಡ್ತಾರೆ. ಸೇರಿಗೆ ಸವಾಸೇರು ಎನ್ನುವಂತಾಗಿದೆ ಎಂದು ಟೀಕಿಸಿದರು.
ಪಂಜಾಬ್‌ನಲ್ಲಿ ಒಬ್ಬ ಸಿದ್ದು, ಇಲ್ಲೊಬ್ಬ ಸಿದ್ದು. ಇವರ ಜಗಳದಿಂದ ಕಾಂಗ್ರೆಸ್ ಚೂರು ಚೂರಾಗಿದೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತಾಗಿದೆ ಎಂದು ಅಶೋಕ್ ಹೇಳಿದರು.
ಜನ ಕೋವಿಡ್ ಸಂಕಷ್ಟದಲ್ಲಿದ್ದಾರೆ, ನೆರೆ ಬಂದಿದೆ. ಯಾರಾದರೂ ಒಬ್ಬ ಕಾಂಗ್ರೆಸ್ ಮುಖಂಡ ಜನರ ಬಳಿ ಹೋಗಿ ಭೇಟಿ ಮಾಡಿದ್ದಾರೆಯೆ ಬಂದು ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದಾರೆಯೆ ಎಂದು ಪ್ರಶ್ನಿಸಿದರು.
ನಾವು ಜನರ ಪರ ಇದ್ದೇವೆ. ನೊಂದಿರುವ ಜನರಿಗೆ ಎನ್ ಡಿ ಆರ್ ಎಫ್ ಪರಿಹಾರಕ್ಕಿಂತ ಡಬಲ್ ಕೊಟ್ಟಿದ್ದೇವೆ.
ಸಿದ್ದು,ಡಿಕೆಶಿ, ಪರಮೇಶ್ವರ್, ಖರ್ಗೆ, ಎಂ.ಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲರೂ ಒಂದೊಂದು ಜಾತಿ ಇಟ್ಟುಕೊಂಡು ಹೋಗುತ್ತಿದ್ದಾರೆ.
ಹಾಗಾದರೆ ಜಾತಿಗೆ ಬೆಲೆ ಇಲ್ಲವೇ, ಒಕ್ಕಲಿಗ ಜಾತಿ ಬಗ್ಗೆ ಮಾತಾಡುತ್ತಾರೆ. ನಾನೂ ಒಬ್ಬ ಒಕ್ಕಲಿಗ. ನಮ್ಮಸಮಾಜಕ್ಕೆ ಬೆಲೆ ಇಲ್ಲವೇ ಎಂದು ಅಶೋಕ್ ಗುಡುಗಿದರು.

