ವೀರ ಸೈನಿಕರಿಗೆ ದ್ರೌಪದಿ ಮುರ್ಮು ನಮನ

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯದ ಸಂಕೇತವಾಗಿದೆ ಎಂದು ನೂತನ ರಾಷ್ಟಾಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರಿಗೆ ಜನರು ಯಾವಾಗಲೂ ಋಣಿಯಾಗಿರಬೇಕೆಂದು ಹೇಳಿದ್ದಾರೆ.

ಕಳೆದ 1999. ಜುಲೈ 26 ರಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್ ಜಯಿಸಿ ಪರಾಕಾಷ್ಠೆಯನ್ನು ಘೋಷಿಸಿತು.

ಲಡಾಕ್‍ನ ಕಾರ್ಗಿಲ್ ಹಿಮಾವೃತ ಪರ್ವತದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ವಿಜಯ ಸಾಧಿಸಲಾಗಿತ್ತು.

ಭಾರತಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶವು ಯಾವಾಗಲೂ ಋಣಿಯಾಗಿರುತ್ತದೆ. ಜೈ ಹಿಂದ್ ಎಂದು ಮುರ್ಮು ತಿಳಿಸಿದ್ದಾರೆ.