ಚೈನಾ ಪದಾರ್ಥ ಬಹಿಷ್ಕಾರಿಸಿ ಯೋಧರಿಗೆ ಸಮರ್ಪಣೆ

ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ  23ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಯೋಧರ ಒಂದು ನೆನಪು ಕಾರ್ಯಕ್ರಮ ಏರ್ಪಡಿಸಿ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಿವೃತ್ತ  6 ಜನ ವೀರ ಯೋಧರಿಗೆ ಸನ್ಮಾನಿಸಲಾಯಿತು

20ವರ್ಷಕ್ಕೂ ಹೆಚ್ಚು ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ವೀರ ಯೋಧರಾದ ಎಂ ವಿ ಕುಮಾರ್, ವಿರುಪಾಕ್ಷಪ್ಪ, ಕೆ ವಿಮಹೇಶ್,ಕೆ ಪಿ ಮಹೇಶ್, ಕಾಂತರಾಜು ಬಿ, ಮಂಜು ಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು

ಈ ವೇಳೆ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಭಾರತ ದೇಶದ ಕಾರ್ಗಿಲ್ ಯುದ್ದವು ಇಡೀ ಪ್ರಪಂಚವೇ ಎದುರು ನೋಡುತ್ತಿದ್ದ ಯುದ್ಧ ಎಂದು ಹೇಳಿದರು.

ಪಾಕಿಸ್ತಾನದ ಯೋಧರು ಮತ್ತು ಉಗ್ರಗಾಮಿಗಳು ಭಾರತದ ಸಿಯಾಚಿನ್ ಗಡಿರೇಖೆ ನುಗ್ಗಿ ನಮ್ಮ ಕೆಲವು ಪ್ರದೇಶವನ್ನ ಆಕ್ರಮಿಸಿಕೊಂಡಿದ್ದರು.

ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ  ವಾಜಪೇಯಿ ರವರ ಆದೇಶದ ಮೇರೆಗೆ ಯುದ್ಧ ಪ್ರಾರಂಭವಾಯಿತು.

ನಮ್ಮ ವೀರ ಯೋಧರು ಯುಧವನ್ನ ಗೆದ್ದು ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ತೋರಿಸಿಕೊಟ್ಟರು ಎಂದು ಸ್ಮರಿಸಿದರು.

ಕಾರ್ಗಿಲ್ ಯುದ್ದವು ಇಂದಿನ ಯುವಕರಿಗೆ ಸ್ಪೂರ್ತಿ ಮತ್ತು ಯುದ್ದದಲ್ಲಿ ಮಡಿದ ಯೋಧ ಕುಟುಂಬಕ್ಕೆ ಸಾಂತ್ವನ ಹೇಳಲು ಮತ್ತು ಅವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ನಾವೆಲ್ಲ  ಚೈನಾ ಪದಾರ್ಥಗಳ ಬಹಿಷ್ಕಾರ ಮಾಡುವ ಮೂಲಕ ಯೋಧರಿಗೆ ಸಮರ್ಪಿಸೊಣ ಎಂದು ಕರೆ ನೀಡಿದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ,ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ ಶೆಣೈ,ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿ ಮಂಜು ,ಬಿಜೆಪಿ ಫಲಾನುಭವಿ ಪ್ರಕೋಷ್ಟ ಸಂಚಾಲಕ ಪರಮೇಶ್ ಗೌಡ ,ನಗರಪಾಲಿಕೆ ಸದಸ್ಯ ಜಗದೀಶ್ ,ಯುವ ಭಾರತ ಸಂಘಟನೆಯ ಸಂಚಾಲಕ ಆನಂದ್, ಯುವಮೋರ್ಚಾ ಅಧ್ಯಕ್ಷರುಗಳಾದ ಸಚಿನ್ , ಲೋಹಿತ್ ಹಾಗೂ ಅಜಯ್ ಶಾಸ್ತ್ರಿ, ಸಂದೀಪ್ ಸಿ ಮತ್ತು ರಮೇಶ್, ಅಪೂರ್ವ ಸುರೇಶ್,ಪಂಕಜ್, ಶರತ್,ಶಿವು ,ಸುಚೀಂದ್ರ,ಚಕ್ರಪಾಣಿ, ರಂಗನಾಥ್,ಮಹದೇವಪ್ರಸಾದ್,ರಾಜು,ಸಿದ್ದೇಶ್ ಮತ್ತಿತರರು ಹಾಜರಿದ್ದರು.