ಸಚಿವ ಪಾರ್ಥ ಆಪ್ತೆ ಅರ್ಪಿತಾ ಮನೆಯಲ್ಲಿ 27.9 ಕೋಟಿ ರೂ,ಅಪಾರ ಚಿನ್ನ ಪತ್ತೆ

ಕೋಲ್ಕತ್ತಾ: ಬಂಧಿತ ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಅಪಾರ್ಟ್‍ಮೆಂಟ್‍ನಲ್ಲಿ 27.9 ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ನಿರ್ದೇಶನಾಲಯ (ಇಡಿ) ತಪಾಸಣೆ ನಡೆಸಿದಾಗ ಇಷ್ಟೋಂದು ನಗದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ಬೆಲ್ಘಾರಿಯಾದಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ಬುಧವಾರ ಇಡಿ ದಾಳಿ ನಡೆಸಿದಾಗ ನಗದು ರಾಶಿಯೇ ಕಂಡುಬಂದಿದೆ.

ತಡ ರಾತ್ರಿವರೆಗೂ ಎಣಿಕೆ ಮಾಡಿದ ನಂತರ 27.90 ಕೋಟಿ ರೂ ಹಾಗೂ ಸುಮಾರು1ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಕೋಲ್ಕತ್ತಾದ ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರ ಮತ್ತೊಂದು ಫ್ಲಾಟ್ನಿಂದ 21 ಕೋಟಿ ರೂಪಾಯಿಗೂ ಹೆಚ್ಚು ನಗದು, ಆಭರಣ ಮತ್ತು ವಿದೇಶಿ ವಿನಿಮಯವನ್ನು ವಶಪಡಿಸಿಕೊಂಡ ಐದು ದಿನಗಳ ನಂತರ ಮತ್ತೆ ಭಾರಿ ಹಣ ಮತ್ತು ಚಿನ್ನ ಪತ್ತೆಯಾಗಿದೆ.