ಐಸಿಸ್ ಭಯೋತ್ಪಾದಕನ ಬಂಧನ

ಯುಪಿ: ಯುಪಿ ಎಟಿಎಸ್ ತಂಡವು  ಐಎಸ್‌ಐಗೆ ಸೇರಿದ ಭಯೋತ್ಪಾದಕನನ್ನು ಅಜಂಗಢದಲ್ಲಿ ಬಂಧಿಸಿದೆ.

ಬಂಧಿತ ಉಗ್ರನ ಹೆಸರು ಸಬಾವುದ್ದೀನ್ ಅಜ್ಮಿ ಎಂದು ಹೇಳಲಾಗುತ್ತಿದೆ. 

ಈತ ಅಜಂಗಢ ಜಿಲ್ಲೆಯ ಮುಬಾರಕ್‌ ಪುರ ವಿಧಾನ ಸಭಾದ ನಿವಾಸಿ.

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು. ಭಯೋತ್ಪಾದಕ ಐಎಸ್‌ಐ ಮುಖಂಡನೊಂದಿಗೆ ನೇರ ಸಂಪರ್ಕದಲ್ಲಿದ್ದನೆಂದು ಗೊತ್ತಾಗಿದೆ.

ಆರ್‌ ಎಸ್ ಎಸ್  ನವರನ್ನು ಗುರಿಯಾಗಿಸಿ ಭಯೋತ್ಪಾದನೆ ಮತ್ತು ಜಿಹಾದ್‌  ನಡೆಸಲು ತಯಾರಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಅಲ್ಲದೆ ಭಯೋತ್ಪಾದಕ ಅಜ್ಮಿ ಮುಸ್ಲಿಂ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.