ಹುಬ್ಬಳ್ಳಿ: ರಾಜ್ಯದಲ್ಲಿ ಮೂರನೇ ಸಿಎಂ ಆದರೂ ಬರಲಿ ನಾಲ್ಕನೇಯವರಾದರೂ ಬರಲಿ ನಮಗೆ ಸಂಬಂಧವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ನನಗೆ ಮೊದಲೇ ಗೊತ್ತಿತ್ತು ಅದನ್ನ ಮೊದಲೇ ಹೇಳಿದ್ದೆ ಆದರೆ ಬೊಮ್ಮಾಯಿಯವರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ರ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ.ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ, ಅಲ್ಲೆಲ್ಲಾ ಸ್ಪರ್ಧಿಸಲು ಆಗುತ್ತದೆಯೇ ಎಂದು ಮರು ಪ್ರಶ್ನಿಸಿದರು.
ಸಧ್ಯ ನಾನು ಬದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ನಿಮಗೇ ಹೇಳುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ನೀತೀಶ್ ಕುಮಾರ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಎನ್‍ಡಿಎ ಏನು ಅಂತ ಗೊತ್ತಾಗಿ ತೊರಿದಿದ್ದಾರೆ ಎಂದು ಹೇಳಿದರು.
ಅವರೊಬ್ಬ ಸಮಾಜವಾದಿ ಹಿನ್ನಲೆಯಿಂದ ಬಂದಿದ್ದರು. ಕೋಮುವಾದಿ ಪಕ್ಷದ ಸ್ನೇಹ ಬಿಟ್ಟಿದ್ದು ಒಳ್ಳೆಯದೇ ಎಂದರು.
ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಹಿಂದೆ ಆರ್‍ಎಸ್‍ಎಸ್‍ನ ಪ್ರಮುಖರು ತ್ರಿವರ್ಣ ರಾಷ್ಟ್ರಧ್ವಜ ಬೇಡ ಅಂದಿದ್ದರು ಆದ್ದರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

