ಸ್ವಾತಂತ್ರ್ಯ ಚಳಿವಳಿಯಲ್ಲಿ ಬ್ರಾಹ್ಮಣರ ಪಾತ್ರ ಮಹತ್ವವಾದುದು; ಜಾತಿಯತೆಗಿಂತ ರಾಷ್ಟ್ರೀಯತೆ ಪಾಲಿಸುವವರು ವಿಪ್ರರು -ಎಸ್ ಎ ರಾಮದಾಸ್

ಮೈಸೂರು: ಮೈಸೂರು ಬ್ರಾಹ್ಮಣರ ಸಂಘಟನೆಗಳ ಒಕ್ಕೂಟ ವತಿಯಿಂದ  ಬ್ರಾಹ್ಮಣರ ನಡಿಗೆ 75ನೇ ಸ್ವಾತಂತ್ರ ದಿನಾಚರಣೆ ಅಮೃತ ಮಹೋತ್ಸವ ಕಡೆಗೆ ಸೇಂಟ್ ಮೇರಿಸ್ ವೃತ್ತದಿಂದ ರಾಮಾನುಜ ರಸ್ತೆ ಮಾರ್ಗವಾಗಿ  ಎಂಜಿ ರಸ್ತೆ ಮೂಲಕ ಅಗ್ರಹಾರ ವೃತ್ತ  ತನಕ 250ಕ್ಕೂ ಹೆಚ್ಚು ಹಲವು ವಿಪ್ರ ಸಂಘಟನೆಯ ಮುಖ್ಯಸ್ಥರು ಜಾಗಟೆ ಶಂಖನಾದ ಹಾಗೂ ವೇದಘೋಷ ಹೇಳುತ್ತಾ ಭಾರತ ಮಾತೆಗೆ ಜೈಕಾರ ಕೂಗುತಾ ತ್ರಿವರ್ಣ ಧ್ವಜ ಹಿಡಿದು  ಮೆರವಣಿಗೆಯಲ್ಲಿ ಸಾಗಿದರು.

ಇದೇ ಸಂದರ್ಭದಲ್ಲಿ ಶಾಸಕ ಎಸ್.ಎ ರಾಮದಾಸ್ ರವರು ಮಾತನಾಡಿ, ಭರತಪೂರ್ವ ಬ್ರಿಟೀಷರ ವಿರುದ್ಧ ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ  1.86ಸಾವಿರ ಮಂದಿ‌ ಹೋರಾಟದಲ್ಲಿ ಸೇವೆಯನ್ನ ಮಾಡಿ ತಮ್ಮ ಜೀವವನ್ನೇ ಅರ್ಪಿಸಿದ್ದಾರೆ ಅದರಲ್ಲಿ 32ಸಾವಿರಕ್ಕೂ ಹೆಚ್ಚು ವಿಪ್ರರಿದ್ದರು, ಬ್ರಿಟೀಷರಿಂದ ಆಳ್ವಿಕೆ ರಹಿತ ಭಾರತ  ಸ್ವದೇಶಿ ವಸ್ತುಗಳ ಬಳಕೆ ಸೇರಿದಂತೆ ಅಖಂಡ ಭಾರತ ನಿರ್ಮಾಣದ ಸಂಕಲ್ಪ ನಮ್ಮದಾಗಿತ್ತು. ಸುಬ್ಬರಾಯನ ಕೆರೆ ಮತ್ತು ರಾಮಸ್ವಾಮಿ ವೃತ್ತಕ್ಕೆ ಇತಿಹಾಸ ಹೋರಾಟದ ದಿನಗಳನ್ನ ತಿಳಿಸುತ್ತದೆ ಎಂದರು.

 ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾವಿರಾರು ವಿಪ್ರರು ಭಾರತಮಾತೆ ರಕ್ಷಣೆಗಾಗಿ ಹೋರಾಡಿದವರು ಹಾಗಾಗಿ ನಾವು ಬ್ರಾಹ್ಮಣರು ಜಾತಿಯತೆಗಿಂದ ರಾಷ್ಟ್ರೀಯತೆ ಹಿಂದೂ ಧರ್ಮವನ್ನ ಹೆಚ್ಚಾಗಿ ಪಾಲಿಸುತ್ತವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ರವರು ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅಮೃತ ಮಹೋತ್ಸವ ಆಚರಣೆಯಲ್ಲಿ ಅವಕಾಶ ಕಲ್ಪಿಸಿದ್ದು ಯುವಕರು ಹೆಚ್ಚಾಗಿ ದೇಶಭಕ್ತಿ ಮೂಡಿದೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು

 ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ, ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ , ಮೈಲಾಕ್ ಮಾಜಿ ಅಧ್ಯಕ್ಷ ಎನ್ ವಿ ಫಣೀಶ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ನಗರಪಾಲಿಕೆ ಸದಸ್ಯ ಮಾವಿ ರಾಮಪ್ರಸಾದ್, ವೆಂಗಿಪುರದ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ, ನಂ.ಶ್ರೀಕಂಠ ಕುಮಾರ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಆರ್ ಬಾಲಕೃಷ್ಣ, ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಯತಿರಾಜ್,  ಬ್ರಾಹ್ಮಣ ಗ್ರಾಮಾಂತರ ಅಧ್ಯಕ್ಷ ಗೋಪಾಲರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಸುಚೇಂದ್ರ, ರಂಗನಾಥ್ , ಚಕ್ರಪಾಣಿ, ವಿಪ್ರ ಜಾಗೃತಿ ವೇದಿಕೆ ಮುಳ್ಳೂರು ಸುರೇಶ್ ,ವಿಪ್ರ ಪ್ರೊಫೆಶನಲ್ ಅಧ್ಯಕ್ಷ ಶ್ರೀನಿವಾಸ್ ಭಾಷ್ಯಂ, ಎಂ ಐ ಟಿ ಮುರುಳಿ, ವಿವೇಕಾನಂದ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಮಂಜುನಾಥ್ , ವಿಪ್ರ ಮಹಿಳಾ ಸಂಘಟನೆಯ ಸೌಭಾಗ್ಯ ಮೂರ್ತಿ, ಡಾ॥ಲಕ್ಷ್ಮಿ, ಲತಾ ಬಾಲಕಷ್ಣ, ಜ್ಯೋತಿ, ಕಿರಣ್ ಮತ್ತಿತರರಿದ್ದರು.