ಸತ್ಯ ಮರೆಮಾಚಲು ಸಿಎಂ ಯತ್ನ -ಸಿದ್ದು

ಬೆಂಗಳೂರು: ಮಾಧುಸ್ವಾಮಿ ಒಬ್ಬ ಹಿರಿಯ ಸಚಿವರು. ನಮ್ಮ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ.ಮ್ಯಾನೇಜ್ ಮಾಡುತ್ತಿದ್ದೇವೆ ಎಂದಿದ್ದಾರೆ. ಈ ಸತ್ಯವನ್ನು ಮರೆಮಾಚಲು ಸಿಎಂ ಬಸವರಾಜ ಬೊಮ್ಮಾಯಿ ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಕೆಲವು ಸಚಿವರನ್ನುಎತ್ತಿ ಕಟ್ಟಿ ಮುನಿರತ್ನ, ಸೋಮಶೇಖರ್ ಮತ್ತಿತರರಿಂದ ಮಾಧುಸ್ವಾಮಿ ಅವರ ರಾಜೀನಾಮೆ ಕೇಳಿಸುತ್ತಿದ್ದಾರೆ. ಸೋಮಶೇಖರ್ ನಮ್ಮಲ್ಲಿ ಅಂಥದ್ದೇನೂ ನಡೆದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಈ ಸರ್ಕಾರ ಸರಿಯಾಗಿ ನಡೆಯುತ್ತಿದೆಯೇ ಮೊದಲಿಗೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದರು.

ಪ್ರವೀಣ್ ಹತ್ಯೆಯಾದಾಗ ಬಿಜೆಪಿ ಕಾರ್ಯಕರ್ತರೇ ಗಲಾಟೆ ಮಾಡಿದರು. ಬೊಮ್ಮಾಯಿ ವಿರುದ್ಧ ಆಕ್ರೋಶಗಳು ಕೇಳಿಬಂದವು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಮಗೆ ರಕ್ಷಣೆ ಇಲ್ಲ ಎಂದು ದೂರಿದ್ದರು. ಇಷ್ಟೊಂದು ಭ್ರಷ್ಟಾಚಾರ ಹಿಂದೆಂದೂ ಇರಲಿಲ್ಲ. ಸಭೆಯಲ್ಲಿ ನಾವು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಯುವಕರು, ಮಹಿಳೆಯರಿಗೆ ಈ ಸರ್ಕಾರದಲ್ಲಿ ನ್ಯಾಯ ಸಿಗುವುದಿಲ್ಲ. ರಾಜ್ಯದ ಜನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತುಹಾಕಲು ತಯಾರಿದ್ದಾರೆ ಎಂದು ಸಿದ್ದು ಹೇಳಿದರು.