ನವದೆಹಲಿ: ಈಗಾಗಲೇ ಜಿ ಎಸ್ ಟಿ ಹೊರೆಯ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನರಿಗೆ ಬ್ಯಾಂಕ್ ಗಳು ಮತ್ತೊಂದು ಬರೆ ಎಳೆದಿವೆ.
ಎಟಿಎಂ ವಿತ್ ಡ್ರಾ ಮೇಲೆ ಅಕ್ಟೋಬರ್ 1 ರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಿದ್ದು.ಇದರಿಂದ ಎಟಿಎಂ ವಿತ್ ಡ್ರಾ ಗ್ರಾಹಕರಿಗೆ ಹೊರೆಯಾಗಲಿದೆ.
5 ಟ್ರಾನ್ಸಾಕ್ಷನ್ ಬಳಿಕ ಪ್ರತಿ ವಿತ್ ಡ್ರಾಗೆ 17 ರೂಪಾಯಿ ಹಾಗೂ ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಗೆ 6 ರೂಪಾಯಿ ಶುಲ್ಕ ವಿಧಿಸಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಬ್ಯಾಂಕ್ ಗಳು ಈ ನಿರ್ಧಾರ ಮಾಡಿವೆ.
ಆದರೆ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ವಿತ್ ಡ್ರಾ ಮಿತಿ ಕೇವಲ 3 ಕ್ಕೆ ಮಾತ್ರ ಸೀಮಿತ ಮಾಡಲಾಗಿದೆ.
ಎಟಿಎಂ ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಕಾರಣ ವಿತ್ ಡ್ರಾ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದು ಬ್ಯಾಂಕ್ ಗಳು ಸಮರ್ಥಿಸಿಕೊಂಡಿವೆ.

