ಆ. 23ರಂದು ಎಲ್ಲಾ ಜಿಲ್ಲೆಗಳ ಎಸ್ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ -ಮುತಾಲಿಕ್

ಬೆಂಗಳೂರು: ಮೈಕ್ ಶಬ್ದ ಮಾಲಿನ್ಯ ಸಂಬಂಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ‌ ಕಾರಣ ರಾಜ್ಯಾದ್ಯಂತ ಆ.23ರಂದು ಎಲ್ಲಾ ಜಿಲ್ಲೆಗಳ ಎಸ್ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಸೀದಿಗಳ ಮೇಲೆ ಮೈಕುಗಳ ಹಾವಳಿ ಹೆಚ್ಚುತ್ತಿದ್ದು ಇದನ್ನು ನಿಲ್ಲಿಸಬೇಕೆಂದು ನ್ಯಾಯಾಲಯಗಳು ಹೇಳಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ವಿರುದ್ಧ ಎಲ್ಲ ಹಿಂದುಗಳು ಒಗ್ಗಟ್ಟಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.

ಆಗಸ್ಟ್ 15ರಂದು ಚಾಮರಾಜಪೇಟೆಯಲ್ಲಿ ಸ್ವಾತಂತ್ರ ಬಾವುಟವನ್ನು ಹಾರಿಸಿದ ಸರ್ಕಾರದ ಕ್ರಮವನ್ನು ಇದೇ ವೇಳೆ ಮುತಾಲಿಕ್ ಶ್ಲಾಘಿಸಿದರು.

ಇತ್ತೀಚಿಗೆ ಸಾವರ್ಕರ್ ವಿರುದ್ಧ ಅಪಪ್ರಚಾರಗಳು ಅವಮಾನಗಳು ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷ, ಎಸ್ ಡಿ ಪಿ ಐ ಮತ್ತು ಐಪಿ ಎಸ್ ಐ ಅಪ್ಪಟ ದೇಶಭಕ್ತನನ್ನು ಅವಮಾನ ಮಾಡುತ್ತಿವೆ ಎಂದು ‌ಮುತಾಲಿಕ್ ಕಿಡಿಕಾರಿದರು.

1857 ಪ್ರಥಮ ಸಂಗ್ರಾಮ ಸಂದರ್ಭದಲ್ಲಿ ಸುಮಾರು 11 ವರ್ಷಗಳಿಗಿಂತಲೂ ಹೆಚ್ಚು ವರ್ಷ ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಕುರಿತು ನಿಜಾಂಶಗಳನ್ನ ಹೇಳಲು ಒಂದು ಪುಸ್ತಕವನ್ನೂ ಬರೆದರು.

ಅದನ್ನು ದೇಶವಾಸಿಗಳು ಓದಿ ಮತ್ತಷ್ಟು ಕೆರಳುತ್ತಾರೆ ಎಂದು ಒತ್ತಾಯ ಪೂರಕವಾಗಿ ಮುದ್ರಣ ಆಗದ ಹಾಗೆ ನೋಡಿಕೊಂಡು ಅವರನ್ನು ವಿನಾಕಾರಣ ಜೈಲಿನಲ್ಲಿ ಕೊಳೆಯುವಂತೆ ಮಾಡಿದರು.

ಅಂತಹ ದೇಶಭಕ್ತನನ್ನು ಮುಸ್ಲಿಂ ಓಲೈಕೆಗಾಗಿ ಕಾಂಗ್ರೆಸ್ ಪಕ್ಷ ಅವಮಾನ ಮಾಡುತ್ತಿದೆ ಎಂದು ಪ್ರಮೋದ್ ಮುತಾಲಿಕ್  ಕಿಡಿಕಾರಿದರು.

ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವ ಎಂದು ಆಚರಿಸಲು ಶ್ರೀರಾಮ ಸೇನೆ ನಿರ್ಧರಿಸಿದ್ದು ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಭಾವಚಿತ್ರ ಇಟ್ಟು ಪೂಜಿಸಲಾಗುವುದು.

ಹಬ್ಬದ ಸಂದರ್ಭದಲ್ಲಿ ಅವರ ಕುರಿತ ಉಪನ್ಯಾಸ, ಹೋರಾಟ ಚಿತ್ರಗಳ ಪ್ರದರ್ಶನ, ನಾಟಕ, ಕಥಾಸ್ಪರ್ಧೆ ಹಾಡುಗಳ ಸ್ಪರ್ಧೆ, ಚಿತ್ರ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು

ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸ ಶಾಲೆಗಳಲ್ಲಿ ನಮಾಜ್ಗೆ ಅವಕಾಶ ಮಾಡಿಕೊಡಬೇಕು ಹಾಗೂ ಕುರಾನ್ ಪಠಣೆ ಮಾಡಲು ಪ್ರತ್ಯೇಕ ಕೊಠಡಿಗಳಿಗೆ ಬೇಡಿಕೆ ಇಟ್ಟಿರುವುದು ಮೂರ್ಖತನವಾಗಿದ್ದು ಇದನ್ನ ತೀವ್ರವಾಗಿ ಖಂಡಿಸುತ್ತೇವೆ, ಕೂಡಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಅಗ್ರಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಪ್ರಧಾನ ಕಾರ್ಯದರ್ಶಿ ಸುಂದರೇಶ್, ನರಗಲ್ ಸಂಘಟನಾ ಕಾರ್ಯದರ್ಶಿ ಅಮರನಾಥ್, ಸನಾತನ ಧರ್ಮದ ಸಂಸ್ಥಾಪಕ ಭಾಸ್ಕರ್, ಗಂಗಾಧರ ಕುಲಕರ್ಣಿ ಉಪಸ್ಥಿತರಿದ್ದರು.