ಮೈಸೂರು: ಮಹಾತ್ಮಾ ಗಾಂಧೀಜಿಯವರಿಗೂ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದರು.
ಮೈಸೂರಿನಲ್ಲಿ ಮಾದ್ಯಮ ಪ್ರತಿ ನಿಧಿಗಳೊಂದಿಗೆ ಅವರು ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಕುರಿತು ಪ್ರತಿಕ್ರಿಯಿಸಿದರು.
ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಪಡೆದ ಸರ್ಕಾರದ ವಿರುದ್ಧವಾಗಲಿ, ಅಥವಾ ರಾಜಕಾರಣಿಗಳ ವಿರುದ್ಧವಾಗಲಿ, ಕಲ್ಲು ಬೀಸುವುದು ಮತ್ತೊಂದು ಮಾಡುವಂಥದ್ದು ಸಹಜ. ಹಾಗಂತ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಬೆಂಬಲಿಸಲ್ಲ. ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ನವರು ಗಾಂಧಿಯನ್ನು ಕೊಂದಂತಹವರು ನನ್ನ ಕೊಲ್ಲಲ್ವೆ ಎಂದಿದ್ದನ್ನು ನಾವ್ಯಾರು ಒಪ್ಪಲ್ಲ. ಯಾಕೆಂದರೆ ಗಾಂಧಿಗೂ ಸಿದ್ದರಾಮಯ್ಯನವರಿಗೂ ಹೋಲಿಕೆಯಿಲ್ಲ. ಅದು ಸರಿಯಲ್ಲ ಎಂದು ಹೇಳಿದರು.
ನಮ್ಮ ತಪ್ಪುಗಳಿರುತ್ತವೆ. ಆಕ್ರೋಶವನ್ನು ಜನರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಮಾಡುತ್ತಾರೆ. ಅದನ್ನು ನೀವು ಗಾಂಧಿ ಕೊಂದರು, ನನ್ನ ಕೊಲ್ಲಲ್ವೇ ಅಂದರೆ, ಸರಿಯಲ್ಲ ಈ ಹೋಲಿಕೆ ಸರಿಯಲ್ಲ ಎಂದರು.
ಈಗಾಗಲೇ ನಮ್ಮ ಹಿರಿಯ ನಾಯಕರಾದ ಯಡಿಯೂರಪ್ಪನವರು ಆ ಪ್ರಕರಣವನ್ನು ಖಂಡಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ಖಂಡಿಸಿದ್ದಾರೆ. ಈ ರೀತಿ ಆಗಬಾರದಂತೆ ನಾವೆಲ್ಲರೂ ಕೂಡ ನೋಡಿಕೊಳ್ಳಬೇಕು ಎಂದು ವಿಶ್ವನಾಥ್ ಹೇಳಿದರು.

