ಕೊಡಗು ಪ್ರತಿಭಟನೆ ಕೈ ಬಿಟ್ಟ ಸಿದ್ದರಾಮಯ್ಯ: ನಮ್ಮ ಹೋರಾಟ ಪೊಲೀಸ್, ಸರ್ಕಾರದ ವಿರುದ್ಧ -ಸಿದ್ದು

ಬೆಂಗಳೂರು: ನಮ್ಮ ಹೋರಾಟ‌ ಏನಿದ್ದರೂ ನಿಷ್ಕ್ರಿಯ ಪೊಲೀಸರು ಹಾಗೂ‌ ಸರ್ಕಾರದ ವಿರುದ್ಧ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವತಿಯಿಂದ ಆ.26ರಂದು ಕೊಡಗಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.
ಕೊಡಗಿನ‌ ಜನ ಒಳ್ಳೆಯವರು. ನಾವು ಅವರ ಪರವಾಗಿದ್ದೇವೆ.ನಾವು ಜನರ ಪರವಾಗಿ ಹಾಗೂ ಸರ್ಕಾರ, ಪೊಲೀಸರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೆವು ಎಂದು ಹೇಳಿದರು.
ಸರ್ಕಾರವೇ ನಿರ್ದೇಶನ ಮಾಡಿ ಕೊಡಗಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ.ವಿರೋಧ ಪಕ್ಷದ ನಾಯಕನಾಗಿ ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ,ಹಾಗಾಗಿ ನನ್ನ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಹೋರಾಟ ಮಾಡಿದ ವೇಳೆ ಬಿಜೆಪಿ ಕಾರ್ಯಕರ್ತರು, ಭಜರಂಗದಳದವರು,ಆರ್ ಎಸ್ ಎಸ್ ಕಾರ್ಯಕರ್ತರು ಇದ್ದರು. ಬೇಕೆಂದೇ ಪ್ರತಿಭಟನೆ ಮಾಡಿಸಲಾಗಿದೆ ಎಂದು ಸಿದ್ದು ದೂರಿದರು.
ನಾನು ಮಾಂಸಾಹಾರಿ.ಆದರೆ ಮಡಿಕೇರಿಗೆ ಹೋಗಿದ್ದಾಗ ವೀಣಾ ಅಚ್ಚಯ್ಯ‌ಅವರು ಕಳುಹಿಸಿದ್ದ ಊಟ ಮಾಡಿದೆ.ಅವರು ಕೋಳಿ ಸಾರು ಮತ್ತು ಕಳಲೆ ಸಾರು ಇತ್ತು ಆದರೆ ನಾನು ಸಕ್ಕಿ ರೊಟ್ಟಿ,ಕಳಲೆ ಸಾರು ಮಾತ್ರ ತಿಂದೆ ಎಂದು ಸ್ಪಷ್ಟಪಡಿಸಿದರು.
ನನ್ನ ಬಗ್ಗೆ ಯಾರು ಏನು ತಿಂದಿದ್ದೇನೆ ಎಂದು ಹೇಳಿದ್ದಾರೋ ಅವರೇ ಅಂತಹ ಮಾಂಸ‌ತಿನ್ನಲಿ ಎಂದು ಸಂಸದ‌ ಪ್ರತಾಪ್ ಸಿಂಹಗೆ ಸಿದ್ದು ಟಾಂಗ್ ನೀಡಿದರು.