ಮುರುಘಾಶ್ರೀಗಳಿಗೆ 9 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

ಚಿತ್ರದುರ್ಗ: ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಮುರುಘಾಮಠದ ಶಿವಮೂರ್ತಿ ಶ್ರೀಗಳಿಗೆ ನ್ಯಾಯಾಲಯ ಒಂಬತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಸೋಮವಾರ ಬೆಳಿಗ್ಗೆ ಶ್ರೀಗಳನ್ನು ವಿಚಾರಣೆಗೆ ಕರೆತರಲಾಯಿತು. 
ಬೆಳಿಗ್ಗೆಯಿಂದಲೇ ಚಿತ್ರದುರ್ಗದ ಕೋರ್ಟ್ ಬಳಿ ಬಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಬೆಳಿಗ್ಗೆ 11ಗಂಟೆಗೆ ಪೊಲೀಸ್ ಕಸ್ಟಡಿ ಅಂತ್ಯವಾಗಿದೆ.
ಶಿವಮೂರ್ತಿ ಶರಣರ ಪರ ವಕೀಲರು ರೆಗ್ಯುಲರ್ ಬೇಲಿಗೆ ಅರ್ಜಿ ಸಲ್ಲಿಸಿದ್ದರು. ಆದರೆ,ಚಿತ್ರದುರ್ಗ ಜಿಲ್ಲಾ 2 ನೇ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೆ.14 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಪ್ರಕರಣದ ನಂಬರ್1ಆರೋಪಿಯಾಗಿರುವ ಮುರುಘಾ ಶರಣರನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.