ಗ್ವಾಲಿಯರ್: ಏಳು ದಶಕಗಳ ನಂತರ ಭಾರತಕ್ಕೆ ನಮೀಬಿಯಾದಿಂದ 8 ವಿಶೇಷ ಚೀತಾಗಳನ್ನು ತರಲಾಗಿದೆ.

ಕಳೆದ ರಾತ್ರಿ ಆಫ್ರಿಕಾ ದೇಶದಿಂದ ವಿಶೇಷ ಮರದ ಪೆಟ್ಟಿಗೆಗಳಲ್ಲಿ ಇರಿಸಿದ ಚೀತಾಗಳನ್ನು ಹೊತ್ತ ಚೀತಾದಂತೆಯೇ ಕಾಣುವ ಬೋಯಿಂಗ್ ವಿಮಾನ ಸುಮಾರು 10 ಗಂಟೆ ಪ್ರಯಾಣಿಸಿತು.
ಶನಿವಾರ ಬೆಳಿಗ್ಗೆ 8 ಗಂಟೆಗೆ ಗ್ವಾಲಿಯರ್ ವಾಯುನೆಲೆಯಲ್ಲಿ ವಿಮಾನ ಇಳಿಯಿತು ಎಂದು ಅಧಿಕಾರಿಕಾರಿಗಳು ತಿಳಿಸಿದ್ದಾರೆ.
ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್‍ನಲ್ಲಿ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಯಿತು.
ನಂತರ ಅಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 10.45 ಕ್ಕೆ ಮೂರು ಚಿರತೆಗಳನ್ನು ಉದ್ಯಾನದ ಆವರಣಕ್ಕೆ ಬಿಟ್ಟರು.
ಕಳೆದ 2 ದಿನ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.ಪ್ರತಿಕೂಲ ಹವಾಮಾನದಿಂದಾಗಿ ಕೆಲವು ರಸ್ತೆಗಳನ್ನು ವಾಹನ ಸಂಚಾರಕ್ಕೆ ನಿರ್ಬಂಸಲಾಗಿತ್ತು.
ಒಟ್ಟಾರೆ 70 ವರ್ಷದ ನಂತರ ಅರಣ್ಯ ಸಂರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ವಿಶೇಷ ಚೀತಾಗಳು ಭಾರತಕ್ಕೆ ಕಾಲಿಟ್ಟಿವೆ.

