ದುಷ್ಟವಿಚಾರ ದೂರವಿಟ್ಟುಶಿಷ್ಟವಿಚಾರಗಳಿಗೆ ಸಂಕಲ್ಪತೊಡಲು ಸಿಎಂ ಕರೆ

ಮೈಸೂರು: ಇಂದಿನ ಹತ್ತು ಹಲವಾರು  ಸವಾಲುಗಳನ್ನು ಸಮರ್ಥವಾಗಿ ಎದುರಿಸಿ  ಜನ ಕಲ್ಯಾಣದ ಕಡೆ ದಾಪುಗಾಲು ಹಾಕಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
ದುಷ್ಟವಿಚಾರಗಳನ್ನು ದೂರವಿಟ್ಟು ಶಿಷ್ಟವಿಚಾರಗಳಿಗಾಗಿ ಸಂಕಲ್ಪತೊಡೋಣ ಎಂದು ಕರೆ ನೀಡಿದರು.
ಈ ಬಾರಿಯ ದಸರಾ ಹಲವಾರು ವಿಶೇಷತೆಗಳಿಂದ ಕೂಡಿದೆ. ಕಳೆದೆರಡು ವರ್ಷಗಳಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಘತವೈಭವವನ್ನು ಮರುಕಳಿಸುವ ರೀತಿ ಅದ್ಭುತವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದು ನಾಡಹಬ್ಬ, ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು, ಮನೆಮನೆಯಲ್ಲಿ ನಾಡಹಬ್ಬ ಮಾಡುತ್ತಿದ್ದೇವೆ.  
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಈ ನಾಡನ್ನು ಸುಭಿಕ್ಷವಾಗಿಡುವಂತೆ ಆ ತಾಯಿಯಲ್ಲು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು
ತಾಯಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ಕಾಲಕಾಲಕ್ಕೆ ಮಳೆ ಬೆಳೆಯನ್ನು ಕೊಟ್ಟು ರಕ್ಷಿಸುತ್ತಿದ್ದಾರೆ ಇದು ನಮ್ಮೆಲ್ಲರ ಸೌಭಾಗ್ಯ.
ಈ ಶಕ್ತಿ ಪೀಠ ಇಡೀ ನಾಡಿಗೆ ಶಕ್ತಿ ನೀಡುತ್ತಿದೆ. ಮೈಸೂರು ಮಹಾರಾಜರ ಕಾಲದಿಂದ ನಡೆಯುತ್ತಿರುವ ಪೂಜೆಯನ್ನೇ ಪ್ರಜಾಪ್ರಭುತ್ವದಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.
ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳು ಬಂದಿರುವುದು ಸಂತೋಷದ ವಿಷಯ. ಯಾರನ್ನು ಕರೆಯಬೇಕೆಂದು ಚರ್ಚೆ ಮಾಡಿದಾಗ ತಟ್ಟನೆ ಗಮನಕ್ಕೆ ಬಂದಿದ್ದು ರಾಷ್ಟ್ರಪತಿಗಳು. 
ರಾಷ್ಟ್ರಪತಿಗಳ ಕಛೇರಿಗೆ ಕರೆ ಮಾಡಿದಾಗ ತಕ್ಷಣ ಒಪ್ಪಿಗೆಯನ್ನು  ಸಂತೋಷದಿಂದ ಸೂಚಿಸಿದರು ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿತ್ತೇನೆ ಎಂದರು.
ರಾಷ್ಟ್ರಪತಿಗಳಾದ ಮೇಲೆ ಮುರ್ಮು ಅವರು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ, ಅದರಲ್ಲಿಯೂ ತಾಯಿ ಚಾಮುಂಡೇಶ್ವರಿಯ  ಪೂಜೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ನವರಾತ್ರಿಯ ಆರಂಭದಲ್ಲಿ ಸಿಕ್ಕಿರುವುದು ನನ್ನ ಪುಣ್ಯ ಎಂದಿದ್ದರು. 
ಇಷ್ಟು ಶ್ರದ್ಧೆ, ಭಕ್ತಿ ಇರುವ ನಮ್ಮ ರಾಷ್ಟ್ರಪತಿಗಳು ಶ್ರೇಯೋಭಿವೃದ್ಧಿಗೆ ನಮನ ಸಲ್ಲಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಆಗಲಿದೆ.  ಇಂದು ಮಹಿಷಾಸುರ ನಮಗೆ ನೋಡಲು ಸಿಗಲ್ಲ. ನಮ್ಮಲ್ಲಿಯೇ ಇರುವ ಗುಣಗಳನ್ನು ನಾವು ನಾವೇ ನಿಗ್ರಹಿಸಬೇಕು.
ದುಷ್ಟ ವಿಚಾರಗಳನ್ನು ದೂರವಿಟ್ಟು, ಶಿಷ್ಟ ವಿಚಾರಗಳಿಗೆ ಸಂಕಲ್ಪ ತೊಡುವ ದಿನ.
ತಾಯಿ ಚಾಮುಂಡೇಶ್ವರಿ ಇಂದು ಹಂಸವನ್ನು ಏರಿದ್ದಾಳೆ. ದೇವಿಯ ವಾಹನ ಹಂಸ. ಹಂಸ ಬಹಳ ಶುದ್ಧವಾಗಿರುವ ಪಕ್ಷಿ.
ಎಲ್ಲಕ್ಕಿಂತ ಎತ್ತರಕ್ಕೆ ಹಾರುವ ಪಕ್ಷಿ ಇದ್ದರೆ ಅದು ಪರಮಹಂಸ. ಹಿಮಾಲಯದಲ್ಲಿ ಕಾಣುವುದು ಪರಮಹಂಸ. 
ವಿಚಾರದಲ್ಲಿ ಶುಭ್ರತೆ, ನಡವಳಿಕೆಯಲ್ಲಿ ತೂಕಬದ್ಧ ನಡವಳಿಗೆ ಎತ್ತರಕ್ಕೆ ತಮ್ಮ ಭಾವವನ್ನು ತೆಗೆದುಕೊಂಡು ಹೋಗುವಂಥದ್ದು. ಮಾನಸ ಸರೋವರಕ್ಕೆ ಹಾರುವಂತಹ ಪರಮಹಂಸದ ಮೇಲೆ ಎಂದು ತಿಳಿಸಿದರು. 
ಕನ್ನಡ ನಾಡನ್ನು ಎಲ್ಲ ರಂಗದಲ್ಲೂ ಸರ್ವಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ. ಕಷ್ಟದಲ್ಲಿರುವ ಜನರ ಜೀವನ ಮಟ್ಟವನ್ನು ಎತ್ತರಕ್ಕೆ ಒಯ್ಯಬೇಕಿದೆ.
ಸರ್ವರಿಗೂ ಲೇಸನ್ನೇ ಬಯಸುವ ಕಲ್ಯಾಣದ ಅವಶ್ಯಕತೆ ಇದೆ. ಆ ಬುದ್ದಿಯನ್ನು ತಾಯಿ ನೀಡಲಿ ಕನ್ನಡ ನಾಡನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಇದೇವೇಳೆ ಸಿಎಂ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ವಿಶೇಷ ಮಹತ್ವವಿದೆ ಎಂದು ತಿಳಿಸಿದರು. 
9ದಿನಗಳ ಈ ಉತ್ಸವ ನೋಡಲು ದೇಶ, ವಿಧೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ರಾಷ್ಟ್ರಪತಿಗಳಿಂದ ಚಾಲನೆ ಲಭಿಸಿದೆ. ಈ ಸಂದರ್ಭದಲ್ಲಿ ಖುದ್ದು ಪಾಲ್ಗೊಂಡಿರುವುದು ನನಗೆ ಅತ್ಯಂತ ಸಂತೋಷವಾಗಿದೆ ಎಂದು ತಿಳಿಸಿದರು.
ಇಷ್ಟು ದಿನ ಮೈಸೂರು ದಸರಾವನ್ನು ದೂರದರ್ಶನದಲ್ಲಿ ಈಗೆ ಇಲ್ಲೇ ಪಾಲ್ಗೊಂಡಿರುವುದು ನನಗೆ ಬಹಳ ಸಂತಸ ತಂದಿದೆ  ಎಂದು ತಿಳಿಸಿದರು.
ಧರ್ಮ, ಸಂಸ್ಕೃತಿಗಳಿಂದ ಮೇಳೈಸಿದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ. ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.