ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ತಮ್ಮ ಹೆಣ ಕೂಡ ಬಿಜೆಪಿ ಹೋಗೋದಿಲ್ಲ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಈಶ್ವರಪ್ಪ, ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ? ನಾಯಿಯೂ ಕೂಡ ಅವರ ಹೆಣ ಮೂಸಿ ನೋಡೋದಿಲ್ಲ ಎಂದು ಹೇಳಿದರು.

ಬಿಜೆಪಿ  ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್  ಅವರನ್ನ ಬಫೂನ್ ಎಂದು ಕರೆದ ಸಿದ್ಧರಾಮಯ್ಯ ವಿರುದ್ಧ ಸಿಡಿಮಿಡಿಗೊಂಡ  ಈಶ್ವರಪ್ಪ, ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವುದು ಅವರ ಜವಾಬ್ದಾರಿ. ಮತ್ತೆ ಆ ಪದ ಬಳಕೆ ಮಾಡಿದರೇ ನಾವು ಅದೇ ರೀತಿ ಉತ್ತರಿಸಬೇಕಾಗುತ್ತೆ ಎಂದು ಗುಡುಗಿದರು.