ಕೇಂದ್ರ ಬಜೆಟ್ ಮುಖ್ಯಾಂಶಗಳು

ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋಟಿ ಮೀಸಲು,

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ ನೀಡಲಾಗಿದೆ.

ಕರಕುಶಲಕರ್ಮಿಗಳಿಗೆ ನೂತನ ಯೋಜನೆ.

ಪಿಎಂ ವಿಕಾಸ್ ಹೊಸ ಯೋಜನೆ ಜಾರಿ.

ಆತ್ಮನಿರ್ಭರ ಯೋಜನೆಯಡಿ ಕುಶಲಕರ್ಮಿಗಳಿಗೆ ನೆರವು.

ಶ್ರೀಅನ್ನ ಜೋಳ, ಶ್ರೀ ಅನ್ನರಾಗಿ, ಶ್ರೀಅನ್ನ ಗೋಧಿ, ಸಿರಿಧಾನ್ಯಗಳ ಕೃಷಿ ಯೋಜನೆಗೆ ಹೊಸ ಯೋಜನೆ. ಸಿರಿಧಾನ್ಯ ಕೃಷಿಗೆ ಆದ್ಯತೆ.

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ.

ಮೀನುಗಾರಿಕೆಗೆ 6 ಸಾವಿರ ಕೋಟಿ ಮೀಸಲು.

ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು. ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ.

ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ ಯೋಜನೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ

ರೈಲ್ವೆಗೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು. ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ

ಮ್ಯಾನ್ ಹೋಲ್ ನಿಂದ ಮಷಿನ್ ಹೋಲ್ ಗೆ ಬದಲಾವಣೆ.

ಕೃಷಿಸಾಲದ ಗುರಿ ರೂ.20 ಲಕ್ಷ ಕೋಟಿಗೆ ಹೆಚ್ಚಳ,

ಇ-ಕೋರ್ಟ್ ಗಳಿಗೆ 7 ಸಾವಿರ ಕೋಟಿ ರೂಪಾಯಿ ಅನುದಾನ.

ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ಕ್ರಮ. 

ಐಐಟಿಗೆ 5 ವರ್ಷಗಳ ಕಾಲ ಅಧ್ಯಯನಕ್ಕೆ ಅನುದಾನ.

5ಜಿ ಅಪ್ಲಿಕೇಶನ್ ಅಭಿವೃದ್ಧಿಗೆ ನೂರು ಲ್ಯಾಬ್ ಸ್ಥಾಪನೆ.

2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ.

ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು.

ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ.

ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ವಾಹನಗಳು ಗುಜರಿಗೆ.

ಸಾಮಾನ್ಯ ಗುರುತು ಚೀಟಿಯಾಗಿ ಪ್ಯಾನ್ ಕಾರ್ಡ್ ಬಳಕೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆ್ಯಪ್.

ಒಂದು ಜಿಲ್ಲೆಗೆ ಒಂದು ಉತ್ಪನ್ನ.

 “ದೇಖೋ ಅಪ್ನಾ ದೇಶ್” ಪ್ರವಾಸೋದ್ಯಮಕ್ಕೆ ಹೊಸ ಯೋಜನೆ.

ಮಹಿಳಾ ಸಮ್ಮಾನ್ ನಲ್ಲಿ 2 ಲಕ್ಷದವರೆಗೆ ಠೇವಣಿಗೆ ಅವಕಾಶ.

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಶೇ.76ರಷ್ಟು ಹೆಚ್ಚಳ.

ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್ ಆಮದು ಸುಂಕ ರದ್ದು

ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ

7 ಲಕ್ಷದವರೆಗೆ ವೈಯಕ್ತಿಕ ತೆರಿಗೆ ವಿನಾಯ್ತಿ 

ಐಟಿ ರಿಟರ್ನ್ಸ್ ಗೆ ಹೊಸ ಫಾರ್ಮ್ ಜಾರಿ. 16 ದಿನಗಳಲ್ಲಿ ಐಟಿ ರಿಟರ್ನ್ಸ್ ಪಡೆಯಬಹುದು

ವಿದೇಶಿ ವಾಹನಗಳ ಆಮದು ದುಬಾರಿರೆಡಿಮೇಟ್ ಬಟ್ಟೆ ಬೆಲೆ ಏರಿಕೆ.